• January 2, 2026

ಕಾಪು ಮಾರಿಗುಡಿ ದೇವಸ್ಥಾನಕ್ಕೆ ನಟಿ ಜಯಪ್ರದಾ ಭೇಟಿ

ಜಿಲ್ಲೆಯ  ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಚಿತ್ರನಟಿ , ಮಾಜಿ ಲೋಕಸಭೆ ಹಾಗೂ ಹಾಲಿ ರಾಜ್ಯಸಭೆ ಸದಸ್ಯೆ ಜಯಪ್ರದಾ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಾರಿಯಮ್ಮ ಉಚ್ಚಂಗಿ ದೇವಿಯ ದರ್ಶನ ಪಡೆದು ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮಾರಿಯಮ್ಮನ ದೇವಸ್ಥಾನವನ್ನು ವೀಕ್ಷಿಸಿದ ಜಯಪ್ರದಾ ಅವರಿಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ತಂತ್ರಿ ದೇವರಲ್ಲಿ ಪ್ರಾರ್ಥಿಸಿ ಪ್ರಸಾದ ನೀಡಿದರು. ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಜಯಪ್ರದಾ ಹರಕೆ ಹೊತ್ತಿದ್ದು ಹರಕೆ ತೀರಿಸಲು ಜಯಪ್ರದಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎನ್ನಲಾಗುತ್ತಿದೆ. ದೇವಸ್ಥಾನಕ್ಕೆ ಭೇಟಿ ನೀಡಿದ ಜಯಪ್ರದಾ ಕೆಲ ಸಮಯ ದೇವಸ್ಥಾನದಲ್ಲಿದ್ದು ಬಳಿಕ ಅಲ್ಲಿಂದ ತೆರಳಿದ್ದಾರೆ. ಈ ಸಂದರ್ಭದಲ್ಲಿ ದೇವಾಲಯದ ಕಾರ್ಯನಿರ್ವಾಣಧಿಕಾರಿ ಪ್ರಶಾಂತ್ ಶೆಟ್ಟಿ , ಆಡಳಿತ ಮುಖ್ಯಸ್ಥರಾದ ರಮೇಶ್ ಹೆಗ್ಡೆ ಕಲ್ಯಾ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ ವಾಸುದೇವ ಶೆಟ್ಟಿ, ನಡಿಕೆರೆ ರತ್ನಾಕರ ಶೆಟ್ಟಿ, ಉಪಾಧ್ಯಕ್ಷರಾದ ಮಾಧವ ಪಾಲನ್ ,ಗಂಗಾಧರ ಸುವರ್ಣ,ದೇವಿಪ್ರಸಾದ್ ಶೆಟ್ಟಿ,ಕಾಪು ದಿವಾಕರ ಶೆಟ್ಟಿ,ಅನಿಲ್ ಬಳ್ಳಾಲ್, ಮೊದಲಾದವರು ಉಪಸ್ಥಿತರಿದ್ದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now