• March 14, 2026

ನಟಿ ದಿವ್ಯಾ ಶ್ರೀಧರ್ ಕೇಸ್ ಗೆ ಬಿಗ್ ಟ್ವೀಸ್ಟ್: ಮಂಗಳಮುಖಿಯನ್ನು ವಿವಾಹವಾಗಿದ್ದ ಅಮ್ಜಾದ್ ಖಾನ್, ಆಡಿಯೋ ವೈರಲ್

ಆಕಾಶ ದೀಪ ಧಾರವಾಹಿ ಮೂಲಕ ಖ್ಯಾತಿ ಘಳಿಸಿ ತಮಿಳು ಕಿರುತೆರೆಯಲ್ಲಿ ಹೆಸರು ಮಾಡಿದ್ದ ನಟಿ ದಿವ್ಯಾ ಶ್ರೀಧರ್ ಹಾಗೂ ಅಮ್ಜಾದ್ ಖಾನ್ ಗಲಾಟೆ ಇದೀಗ ಬೀದಿಗೆ ಬಂದು ನಿಂತಿದೆ. ಸದ್ಯ ಅಮ್ಜಾದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದು ಇದೀಗ ಕೇಸ್ ಗೆ ಮತ್ತೊಂದು ಬಿಗ್ ಟ್ವೀಸ್ಟ್ ಸಿಕ್ಕಿದೆ. ಈ ಸುದ್ದಿ ಕೇಳಿ ಸ್ವತಃ ದಿವ್ಯಾ ಶ್ರೀಧರ್ ಶಾಕ್ ಆಗಿದ್ದಾರೆ. ಅಮ್ಜಾದ್ ಖಾನ್ ಗೆ ಮಂಗಳ ಮುಖಿಯೊಂದಿಗೆ ಸಂಬಂಧ ಇತ್ತು ಎಂಬ ಆಡಿಯೋ ವೈರಲ್ ಆಗಿದೆ. ಈ ಬಗ್ಗೆ ಸ್ವತಃ ಮಂಗಳಮುಖಿಯೇ ವಿಡಿಯೋ ಮೂಲಕ ಹೇಳಿದ್ದು ಆತ ತನನ್ನನು ಮದುವೆ ಕೂಡ ಆಗಿದ್ದ ಎಂದು ಹೇಳಿದ್ದಾರೆ. ಸದ್ಯ ಮಲೇಶಿಯಾದಲ್ಲಿ ನೆಲೆಸಿರುವ ಪ್ರಿಯದರ್ಶಿನಿ ಎಂಬ ಮಂಗಳಮುಖಿಯ ಜೊತೆ ಅಮ್ಜಾದ್ ಖಾನ್ ಸಂಬಂಧ ಇರಿಸಿಕೊಂಡಿದ್ದಾನೆ ಎಂದು ಪ್ರಿಯದರ್ಶಿನಿ ಆರೋಪ ಮಾಡಿದ್ದಾರೆ. ‘ಅವನು ನನ್ನನ್ನು ಪ್ರೀತಿಸಿದ. ಆನಂತರ ಗೊತ್ತಾಯಿತು ಅವನೊಬ್ಬ ಹೆಣ್ಣುಬಾಕಾ ಅಂತ. ಚೆನ್ನೈನಲ್ಲಿ ಅವನು ನನ್ನ ಜೊತೆ ಸಹ ಜೀವನ ನಡೆಸಿದ್ದಾನೆ. ಅಲ್ಲದೇ, ವಿವಾಹ ಕೂಡ ಆಗಿದ್ದ. ಎರಡು ವರ್ಷ ಒಟ್ಟಿಗೆ ಇದ್ದೆವು. ಆಮೇಲೆ ನನ್ನನ್ನು ಅವನು ದೂರ ಮಾಡಿದ. ನಾನು ನೋವು ತಾಳಲಾರದೆ ಮಲೇಶಿಯಾಗೆ ಹೊರಟೆ’ ಎಂದು ಪ್ರಿಯಾದರ್ಶಿನಿ ಆಡಿಯೋದಲ್ಲಿ ಹೇಳಿದ್ದಾರೆ. ಈ ಆಡಿಯೋ ಸಖತ್ ವೈರಲ್ ಆಗಿದೆ. ಈ ಸುದ್ದಿ ತಿಳಿದ ಅಮ್ಜಾದ್ ಪತಿ ದಿವ್ಯಾ ಶ್ರೀಧರ್ ಶಾಕ್ ಆಗಿದ್ದಾರೆ. ಅಲ್ಲದೆ ಆಕೆ ಯಾರು ಅನ್ನೋದನ್ನು ಪತ್ತೆಹಚ್ಚುತ್ತಿದ್ದರಂತೆ. ಸದ್ಯ ಜೈಲಿನಲ್ಲಿರುವ ಅಮ್ಜಾದ್ ಖಾನ್ ಗೆ ಈ ಆಡಿಯೋ ಮತ್ತಷ್ಟು ಸಂಕಷ್ಟ ತರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now