ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಆಸ್ತಿಗಾಗಿ ನಡೆಯಿತಾ ನಟಿ ಸೋನಾಲಿ ಫೋಗಟ್ ಕೊಲೆ?
ಗೋವಾದಲ್ಲಿ ನಡೆದ ಪಾರ್ಟಿಯಲ್ಲಿ ಸೋನಾಲಿ ಅವರಿಗೆ ಬಲವಂತವಾಗಿ ಡ್ರಗ್ಸ್ ನೀಡಿದ್ದು ವಿಚಾರಣೆ ವೇಳೆ ಬಯಲಾಗಿದೆ. ಸೋನಾಲಿ ಸಾವಿಗೆ ಆಕೆಯ ಆಪ್ತರಾದ ಸುಧೀರ್ ಸಾಂಗ್ವಾನ್ ಮತ್ತು ಸಖ್ಖೀಂದರ್ ಕಾರಣ ಎಂದು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಸೋನಾಲಿ ಸಾವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಮತ್ತೊಂದು ವಿಚಾರ ಬೆಳಕಿಗೆ ಬಂದಿದ್ದು ನಟಿಯ ಸಾವು ಆಸ್ತಿಗಾಗಿ ನಡೆದಿದೆ ಎನ್ನಲಾಗುತ್ತಿದೆ. ಗುರುಗ್ರಾಮದಲ್ಲಿ ಸೊನಾಲಿ ಹೆಸರಿನಲ್ಲಿ ಫ್ಲ್ಯಾಟ್ ಇದ್ದು, ಇದು ಸೊನಾಲಿ ಮತ್ತು ಸುಧೀರ್ ಸಾಂಗ್ವಾನ್ ಹೆಸರಿನಲ್ಲಿ ನೋಂದಣಿ ಆಗಿದೆ ಎನ್ನಲಾಗುತ್ತಿದೆ. ನೋಂದಣಿ ಪತ್ರದಲ್ಲಿ ಸೊನಾಲಿ ಅವರು ಸುಧೀರ್ ಪತ್ನಿ ಎಂದು ನಮೂದಿಸಲಾಗಿದೆಯಂತೆ. ಅಲ್ಲದೇ, ಸೊನಾಲಿ ಅವರ ಆಸ್ತಿಯನ್ನು ಸುಧೀರ್ ನೋಡಿಕೊಳ್ಳುತ್ತಿದ್ದರು ಎಂದೂ ಹೇಳಲಾಗಿದ್ದು, ಈ ಆಸ್ತಿಗಾಗಿ ಅವರನ್ನು ಕೊಲೆ ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
