• March 16, 2026

ಪುನೀತ್ ರಾಜ್ ಕುಮಾರ್ ಗೆ ಮುಸ್ಲಿಮರ ದಮ್ ಬಿರಿಯಾನಿ ಸಖತ್ ಇಷ್ಟ: ನಟಿ ಆಶಿತಾ

ಕೈತುಂಬಾ ಸಾಕಷ್ಟು ಅವಕಾಶಗಳು ಇರುವಾಗ್ಲೆ ಸ್ಯಾಂಡಲ್ ವುಡ್ ಸಿನಿಮಾ ರಂಗದಿಂದ ದೂರವಾದ ನಟಿ ಆಶಿತಾ ಇದೀಗ ಮತ್ತೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ. ತಾವು ಸಿನಿಮಾ ರಂಗದಿಂದ ದೂರವಾಗೋಕೆ ಮೀಟೂ ಕಾರಣ ಎಂದು ಆರೋಪಿಸಿರುವ ಆಶಿತಾ ಇದೀಗ ಪುನೀತ್ ರಾಜ್ ಕುಮಾರ್ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ. ರೋಡ್ ರೋಮಿಯೋ ಖ್ಯಾತಿಯ ಆಶಿತಾ ತವರಿನ ಸಿನಿಮಾ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ನಟನೆಯ ಆಕಾಶ್ ಸಿನಿಮಾದಲ್ಲಿ ತಂಗಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಪುನೀತ್ ಜೊತೆಗಿನ ಒಡನಾಟವನ್ನು ಆಶಿತಾ ಮೆಲುಕು ಹಾಕಿದ್ದಾರೆ. ನಾನು ಅದೆಷ್ಟೋ ಜನರೊಂದಿಗೆ ನಟಿಸಿದ್ದೇನೆ. ಅವರೆಲ್ಲರಲ್ಲಿ ಅಪ್ಪು ಮಾತ್ರ ನಿಜಕ್ಕೂ ಅದ್ಭುತ ವ್ಯಕ್ತಿ. ಶೂಟಿಂಗ್ ಇಲ್ಲದ ಸಂದರ್ಭದಲ್ಲಿ ನಾನು, ರಮ್ಯಾ ಹಾಗೂ ಅಪ್ಪುಸಾಕಷ್ಟು ಬಾರಿ ಲಾಂಗ್ ಡ್ರೈವ್ ಹೋಗಿದ್ದೇವೆ. ಪುನೀತ್ ನನ್ನ ಅಣ್ಣನ ಸಮಾನರು ಎಂದಿದ್ದಾರೆ. ಪುನೀತ್ ಅದ್ಭುತ ಡ್ಯಾನ್ಸರ್. ಅವರು ನನ್ನ ಡ್ಯಾನ್ಸ್ ಮೆಚ್ಚಿಕೊಂಡು ಎಷ್ಟೋ ಭಾರಿ ಹೊಗಳಿದ್ದಾರೆ. ಒಬ್ಬ ಡ್ಯಾನ್ಸರ್ ಆಗಿ ಇನ್ನೊಬ್ಬ ಡ್ಯಾನ್ಸರ್ ನ ಹೊಗಳೋದು ನಿಜಕ್ಕೂ ದೊಡ್ಡ ವಿಚಾರ. ನನ್ನ ಸಹೋದರಿಯ ಮದುವೆಗೆ ಬಂದಿದ್ದ ಅಪ್ಪು ಗಂಟೆ ಗಟ್ಟಲೆ ಮದುವೆಯಲ್ಲಿದ್ದರು. ಅವರು ಬೇರೆ ಸೆಲೆಬ್ರಿಟಿಗಳ ಹಾಗಲ್ಲ. ಅಪ್ಪು ನಿಜಕ್ಕೂ ಗ್ರೇಟ್ ಎಂದಿದ್ದಾರೆ. ಪುನೀತ್ ರಾಜ್ ಕುಮಾರ್ ಗೆ ಮುಸ್ಲಿಮರ ದಮ್ ಬಿರಿಯಾನಿ ಅಂದ್ರೆ ಸಖತ್ ಇಷ್ಟ. ಅದಕ್ಕಾಗಿ ಎಲ್ಲರಂತೆ 15 ನಿಮಿಷ ಕ್ಯೂನಲ್ಲಿ ನಿಂತು ತಿಂದರು. ಎರೆಡೆರಡು ಸಲ ಬಿರಿಯಾನಿ ಹಾಕಿಸಿಕೊಂಡು ಎಂಜಾಯ್ ಮಾಡಿದ್ದರು ಎಂದು ಅಪ್ಪು ಜೊತೆಗಿನ ಒಡನಾಟವನ್ನು ನಟಿ ಆಶಿತಾ ಬಿಚ್ಚಿಟ್ಟಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now