ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕನ್ನಡ, ತಮಿಳಿನ ಬಳಿಕ ತೆಲುಗು ಚಿತ್ರರಂಗಕ್ಕೆ ಆಶಿಕಾ ರಂಗನಾಥ್ ಎಂಟ್ರಿ
ತಮಿಳಿನ ಬಳಿಕ ಇದೀಗ ತೆಲುಗಿಗೆ ಪಟಾಕಿ ಪೋರಿ ಕಾಲಿಟ್ಟಿದ್ದಾರೆ. ತೆಲುಗು ನಟ ನಂದಮೂರಿ ಕಲ್ಯಾಣ್ ರಾಮ್ ಜೊತೆ ಡ್ಯೂಯೆಟ್ ಹಾಡಿದ್ದಾರೆ. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆಯಾದ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮೂಡಿ ಬರುತ್ತಿದ್ದು ಈಗಾಗ್ಲೆ ಚಿತ್ರದ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದೆ.
ಕಲ್ಯಾಣ್ ರಾಮ್ ಹಾಗೂ ಆಶಿಕಾ ಕಾಂಬಿನೇಷನ್ ನ ಸಿನಿಮಾವನ್ನು ದೊಡ್ಡ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಇನ್ನಷ್ಟೇ ಚಿತ್ರದ ಟೈಟಲ್ ಹೊರ ಬೀಳಬೇಕಿದೆ. ಕನ್ನಡ ತಮಿಳಿನ ಬಳಿಕ ಆಶಿಕಾ ತೆಲುಗು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ಅಭಿಮಾನಿಗಳಿಗೆ ಖುಷಿ ನೀಡಿದೆ. ಅಲ್ಲೂ ಈಕೆ ಸಕ್ಸಸ್ ಕಾಣಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.
