• March 16, 2026

ಕಾಂತಾರ ಮೆಚ್ಚಿಕೊಂಡ ಕರಾವಳಿ ಚೆಲುವು ನಟಿ ಅನುಷ್ಕಾ ಶೆಟ್ಟಿ

ಎಲ್ಲಿ ನೋಡಿದ್ರು ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾದ್ದೇ ಹವಾ. ಸಿನಿಮಾ ರಿಲೀಸ್ ಆಗಿ ಮೂರು ವಾರ ಕಳೆದಿದ್ರು ಇಂದಿಗೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಮುಗಿಬಿದ್ದು ಥಿಯೇಟರ್ ನತ್ತ ಮುಖ ಮಾಡ್ತಿದ್ದಾರೆ. ಕಾಂತಾರ ಸಿನಿಮಾವನ್ನು ಕನ್ನಡಿಗರು ಮಾತ್ರವಲ್ಲ ಪರಭಾಷಾ ಮಂದಿಯೂ ಮಚ್ಚಿಕೊಂಡಿದ್ದಾರೆ. ಬೇರೆ ಬೇರೆ ಭಾಷಾಯ ಕಲಾವಿಧರು ಸಿನಿಮಾ ನೋಡ ಕಾಂತಾರಕ್ಕೆ ಫಿದಾ ಆಗಿದ್ದಾರೆ. ಅಲ್ಲದೆ ರಿಷಬ್ ಶೆಟ್ಟಿಯನ್ನು ಕೊಂಡಾಡುತ್ತಿದ್ದಾರೆ. ಈಗಾಗ್ಲೆ ಸಾಕಷ್ಟು ಮಂದಿ ಸಿನಿಮಾ ನೋಡಿ ಪ್ರತಿಕ್ರಿಯಿಸಿದ್ದಾರೆ. ಇದೀಗ ಮಂಗಳೂರು ಬೆಡಗಿ ನಟಿ ಅನುಷ್ಕಾ ಶೆಟ್ಟಿ ಕಾಂತಾರ ಸಿನಿಮಾಗೆ ಫಿದಾ ಆಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅನುಷ್ಕಾ ಶೆಟ್ಟಿ ಬರೆದುಕೊಂಡಿದ್ದಾರೆ. ‘ಕಾಂತಾರ ಸಿನಿಮಾ ನೋಡಿದೆ. ಪೂರ್ತಿಯಾಗಿ ಈ ಚಿತ್ರ ನನಗೆ ಇಷ್ಟ ಆಯ್ತು. ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಸೇರಿ ಇಡೀ ತಂಡಕ್ಕೆ ಅಭಿನಂದನೆಗಳು. ಈ ಅನುಭವ ನೀಡಿದ್ದಕ್ಕಾಗಿ ಧನ್ಯವಾದಗಳು. ರಿಷಬ್​ ಶೆಟ್ಟಿ ನೀವು ಅಮೇಜಿಂಗ್​. ಎಲ್ಲವೂ ಈ ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡಿ’ ಎಂದು ಅನುಷ್ಕಾ ಶೆಟ್ಟಿ ಹೊಗಳಿದ್ದಾರೆ. ಕನ್ನಡದಲ್ಲಿ ಬಿಡುಗಡೆ ಆದ ಕಾಂತಾರ ಇದೀಗ ಪ್ಯಾನ್ ಇಂಡಿಯಾ ಸಿನಿಮಾವಾಗಿ ಸದ್ದು ಮಾಡಿತ್ತಿದೆ. ಅ.14ರಂದು ಕಾಂತಾರ ಹಿಂದಿ ಅವತರಣಿಗೆ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಜೊತೆಗೆ ಅ. 15ರಂದು ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಕಾಂತಾರ ಬಿಡುಗಡೆ ಆಗಿದ್ದು, ಅಕ್ಟೋಬರ್ 20ರಂದು ಮಲಯಾಳಂನಲ್ಲಿ ಬಿಡುಗಡೆಗೊಳ್ಳಲಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now