• March 14, 2026

ಮೊದಲ ಬಾರಿ ಮುದ್ದಾದ ಅವಳಿ ಮಕ್ಕಳ ಮುಖ ತೋರಿಸಿದ ನಟಿ ಅಮೂಲ್ಯ

ಬಾಲನಟಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟು ಬಳಿಕ ಸ್ಟಾರ್ ನಟಿಯಾಗಿ ಗುರುತಿಸಿಕೊಂಡ ನಟಿ ಅಮೂಲ್ಯ ಇದೀಗ ಮುದ್ದು ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ಕೃಷ್ಣ ಜನ್ಮಷ್ಟಮಿಯ ಪ್ರಯುಕ್ತ ಮೊದಲ ಭಾರಿಗೆ ಅಮೂಲ್ಯ ಮುದ್ದು ಮಕ್ಕಳ ಮುಖವನ್ನು ತೋರಿಸಿದ್ದಾರೆ. ಸಿನಿಮಾ ರಂಗದಿಂದ ದೂರವಿದ್ದು ನಟಿ ಅಮೂಲ್ಯ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಮಗು ಹುಟ್ಟಿದ ಕೆಲ ದಿನಗಳ ಬಳಿಕ ಮಕ್ಕಳ ಬೆರಳುಗಳನ್ನ ಮಾತ್ರವೇ ತೋರಿಸಿದ್ದ ಅಮೂಲ್ಯ ಇದೀಗ ಅವಳಿ ಮಕ್ಕಳ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟಿಯ ಮಕ್ಕಳನ್ನು ನೋಡಬೇಕು ಎನ್ನುವುದು ಅಮೂಲ್ಯ ಅಭಿಮಾನಿಗಳ ಆಸೆ ಆಗಿತ್ತು. ಇದೀಗ ಮಕ್ಕಳೊಂದಿಗಿರುವ ಫೋಟೋ ಹಂಚಿಕೊಂಡಿರುವ ಅಮೂಲ್ಯ ನಮ್ಮ ಕಂದಮ್ಮಗಳಿಗೆ ನಿಮ್ಮ ಹಾರೈಕೆಗಳು ಇರಲಿ ಎಂದಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now