ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬೆಂಕಿಗೆ ತುಪ್ಪ ಸುರಿಯೋ ಕೆಲಸ ಮಾಡಲ್ಲ: ಕಾಂತಾರ ಕುರಿತು ಚೇತನ್ ಹೇಳಿಕೆಗೆ ಉಪೇಂದ್ರ ಪ್ರತಿಕ್ರಿಯೆ
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತೊಡಗಿಕೊಂಡಿರುವ ನಟ ಉಪೇಂದ್ರ ಕಾಂತಾರ ಸಿನಿಮಾದ ಕುರಿತು ನಟ ಚೇತನ್ ನೀಡಿರುವ ಹೇಳಿಕೆಯ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಚೇತನ್ ನೀಡಿರುವ ಹೇಳಿಕೆಯ ಕುರಿತು ನಾನು ಏನು ಹೇಳಲ್ಲ ಎಂದಿದ್ದಾರೆ.
ಈ ತರದ ಬೆಳವಣಿಗೆ ಅಸಹ್ಯ ಅನಿಸುತ್ತಿದೆ. ಬೆಂಕಿಗೆ ತುಪ್ಪ ಸುರಿಯೋ ಕೆಲಸ ನಾನು ಮಾಡಲ್ಲ. ಭೂತಾರಾಧನೆ ಅವರವರ ವೈಯಕ್ತಿಕ ನಂಬಿಕೆ. ನಾನು ಅದೇ ಊರಿನಿಂದ ಬಂದವನು. ನನಗೆ ಭೂತಾರಾಧನೆ ಬಗ್ಗೆ ವಿಶೇಷವಾದ ನಂಬಿಕೆ ಇದೆ ಜೊತೆಗೆ ನನ್ನ ತಂದೆ ಇವತ್ತಿಗೂ ನಾಗರಾದನೆಯನ್ನೂ ಮಾಡಿಕೊಂಡು ಬರುತ್ತಿದ್ದಾರೆ. ಅದು ತುಂಬಾ ನಂಬಿಕೆ ಇರೋ ಜಾಗ. ಆ ಬಗ್ಗೆ ಮಾತನಾಡಬಾರದು ಎಂದು ಚೇತನ್ ಹೇಳಿಕೆಗೆ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
