ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನಟ ಶ್ರೀವಿಷ್ಣು ಆರೋಗ್ಯ ಗಂಭೀರ: ಆಸ್ಪತ್ರೆಗೆ ದಾಖಲು
ಶ್ರೀವಿಷ್ಣು ಅವರಿಗೆ ಡೆಂಗ್ಯೂ ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ಲೇಟ್ ಲೇಟ್ಸ್ ಸಂಖ್ಯೆ ತುಂಬಾ ಕಮ್ಮಿಯಾಗಿದ್ದು, ವಿಷ್ಣು ಗಂಭೀರ ಸ್ಥಿತಿಯಲ್ಲಿದ್ದಾರೆ.ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಪ್ರಾಣಕ್ಕೆ ಅಪಾಯವಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಶ್ರೀವಿಷ್ಣು ನಟನೆಯ ಅಲ್ಲೂರಿ ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆ ಆಗಿದೆ. ಸದ್ಯದಲ್ಲೇ ಸಿನಿಮಾ ಬಿಡುಗಡೆ ಆಗಲಿದ್ದು ಸಿನಿಮಾದ ಕೆಲಸಗಳಲ್ಲಿ ಶ್ರೀವಿಷ್ಣು ತೊಡಗಿಕೊಂಡಿದ್ದರು. ಈ ಮಧ್ಯೆ ಆರೋಗ್ಯ ಬಿಗಡಾಯಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ರೀವಿಷ್ಣು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
