• March 14, 2026

ಗನ್ ಹಿಡಿದು ಫೀಲ್ಡ್ ಗೆ ಇಳಿದ ಯಶ್: ಮುಂದಿನ ಸಿನಿಮಾದ ಬಗ್ಗೆ ಹಿಂಟ್ ಕೊಟ್ಟ ರಾಕಿ ಭಾಯ್

ಯಶ್ ನಟನೆಯ ಕೆಜಿಎಫ್ ಸಿನಿಮಾದ ಬಳಿಕ ರಾಕಿ ಬಾಯ್ ಮುಂದಿನ ಸಿನಿಮಾ ಯಾವುದು ಅನ್ನೋ ಕುತೂಹಲ ಕ್ರಿಯೇಟ್ ಆಗಿದೆ. ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾದ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದರು ಯಶ್ ಮಾತ್ರ ಯಾವುದಕ್ಕೂ ಉತ್ತರಿಸದೆ ಸೈಲೆಂಟ್ ಆಗಿದ್ದಾರೆ. ಇದೀಗ ರಾಕಿ ಬಾಯ್ ಗನ್ ಹಿಡಿದು ಫಿಲ್ಡ್ ಗೆ ಇಳಿದಿದ್ದು ಮುಂದಿನ ಸಿನಿಮಾದ ಸುಳಿವು ಕೊಟ್ಟಿದ್ದಾರೆ. ಕೆಜಿಎಫ್ ಸಿನಿಮಾದ  ಬಳಿಕ ಯಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳೋಕೆ ನಿರ್ದೇಶಕರು ತುದಿಗಾಲಲ್ಲಿ ನಿಂತಿದ್ದಾರೆ. ಪರಭಾಷೆಯ ಸ್ಟಾರ್ ನಿರ್ದೇಶಕರು ಯಶ್ ಕಾಲ್ ಶೀಟ್ ಗಾಗಿ ಕಾದು ಕೂತಿದ್ದಾರೆ. ಕೆಜಿಎಫ್ ಬಳಿಕ ಯಶ್ ಮುಂದಿನ ಸಿನಿಮಾವನ್ನು ನರ್ತನ್ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅದ್ಯಾಕೋ ಯಶ್ ಗೆ ನರ್ತನೆ ಕಥೆ ಇಷ್ಟವಾಗದೆ ಕೈ ಚೆಲ್ಲಿದ್ದಾರೆ. ಹೀಗಾಗಿ ಮುಂದಿನ ಸಿನಿಮಾದ ಬಗ್ಗೆ ಕುತೂಹಲ ಶುರುವಾಗಿದೆ. ಯಶ್ ಸಿನಿಮಾಗಾಗಿ ಫ್ಯಾನ್ಸ್ ಕಾದು ಕೂತಿರುವಾಗ್ಲೆ ಯಶ್ ಗನ್ ಹಿಡಿದು ಫಿಲ್ಡ್ ಗೆ ಇಳಿದಿದ್ದಾರೆ. ಈ ಮೂಲಕ ಕೆಜಿಎಫ್ 3 ಬಗ್ಗೆ ಸುಳಿವು ನೀಡಿದ್ದಾರೆ. ಕೆಜಿಎಫ್ ಬಳಿಕ ಯಶ್ ಕುಟುಂಬ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಮಡದಿ ರಾಧಿಕಾ ಹಾಗೂ ಮಕ್ಕಳಾದ ಐರಾ ಅಥರ್ವ ಜೊತೆ ಜಾಲಿ ಮೂಡ್ ನಲ್ಲಿರುವ ಯಶ್ ಮನೋರಂಜನೆಗಾಗಿ ಗನ್ ಹಿಡಿದು ಶೂಟಿಂಗ್ ಗೇಮ್ ಆಡಿದ್ದಾರೆ. ಗನ್ ಹಿಡಿದು ಶೂಟ್ ಮಾಡಿತ್ತಿರುವ ವಿಡಿಯೋ ಹಂಚಿಕೊಂಡ ಯಶ್ ಅದರ ಜೊತೆ ಟ್ವೀಟ್ ಕೂಡ ಮಾಡಿ ಕುತೂಹಲ ಮೂಡಿಸಿದ್ದಾರೆ. ʻಗುರಿಯನ್ನು ತಲುಪಲು ಯಾವಾಗಲೂ ಒಂದು ಮಾರ್ಗವಿದೆ. ಅದನ್ನು ಗುರುತಿಸುವುದೇ ಸವಾಲುʼ ಎಂದು ಪವರ್‌ಫುಲ್ ಸಂದೇಶದೊಂದಿಗೆ ಯಶ್ ಪೋಸ್ಟ್ ಮಾಡಿದ್ದಾರೆ. ಧನ್ಯವಾದಗಳು ಜೆಜೆ ಪೆರಿ, ಎಂತಹ ಅದ್ಭುತ ದಿನ. ಮುಂದಿನ ಬಾರಿ ಅದು ಕಲಾಶ್ನಿಕೋವ್ ಆಗಿರಬೇಕು ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಶೇರ್ ಮಾಡಿ ಯಶ್ ಕೆಜಿಎಫ್ 3 ಸಿನಿಮಾದ ಸುಳಿವು ನೀಡಿದ್ರಾ ಎಂಬ ಅನುಮಾನ ಶುರುವಾಗಿದೆ. ಒಟ್ನಲ್ಲಿ ಕೆಜಿಎಫ್ 2 ಬಳಿಕ ಯಶ್ ಸಿನಿಮಾ ಕಣ್ಮುಂಬಿಕೊಳ್ಳಲು ದೇಶ ವಿದೇಶದಲ್ಲೂ ಸಾಕಷ್ಟು ಮಂದಿ ಅಭಿಮಾನಿಗಳು ಕಾದು ಕೂತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now