• January 2, 2026

ನಟ ರಣವೀರ್ ಸಿಂಗ್ ಬೆತ್ತಲೆ ಫೋಟೋ ಶೂಟ್: ಮುಂಬೈನಲ್ಲಿ ದೂರು ದಾಖಲು

ಬಿಟೌನ್ ನಟ ರಣವೀರ್ ಸಿಂಗ್ ಇತ್ತೀಚೆಗೆ ಮ್ಯಾಗಜೀನ್ ಒಂದಕ್ಕೆ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿಕೊಂಡು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಯಾವುದೇ ಕಾರ್ಯಕ್ರಮಕ್ಕೂ ಮೈತುಂಬಾ ಡ್ರಸ್ ತೊಟ್ಟು ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ರಣವೀರ್ ಸಿಂಗ್ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಇದೀಗ ಈ ಕಾರಣಕ್ಕಾಗಿ ರಣವೀರ್ ಸಿಂಗ್ ಮೇಲೆ ಕೇಸು ದಾಖಲಾಗಿದೆ. ಮುಂಬೈನ ಶ್ಯಾಮ್ ಮಂಗರಮ್ ಫೌಂಡೇಶನ್ ಮುಂಬೈನಲ್ಲಿ ರಣವೀರ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾರೆ. ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಟರು ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುತ್ತಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶ್ಯಾಮ್ ಮಂಗರಮ್ ಫೌಂಡೇಶನ್ ಆಗ್ರಹಿಸಿದೆ. ಇಂತಹ ಫೋಟೋ ಶೂಟ್ ಮಾಡಿಕೊಳ್ಳುವವರ ವಿರುದ್ಧ ಕ್ರಮ ತಗೆದುಕೊಳ್ಳುವ ಮೂಲಕ ಸ್ಪಷ್ಟ ಸಂದೇಶವನ್ನು ನೀಡಬೇಕು ಎಂದು ಪೊಲೀಸ್ ಇಲಾಖೆಗೆ ಅದು ಮನವಿ ಮಾಡಿದೆ. ಜೊತೆಗೆ ನಟ ರಣವೀರ್ ಸಿಂಗ್ ಅಭಿಮಾನಿಗಳ ಕ್ಷಮೆ ಕೇಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ರಣವೀರ್ ಸಿಂಗ್ ಬೆತ್ತಲಾಗಿ ಫೋಟೋ ಶೂಟ್ ಮಾಡಿಕೊಂಡಿದ್ದ ನೋಡಿ ಸಾಕಷ್ಟು ಮಂದಿ ನೆಗೆಟಿವ್ ಕಾಮೆಂಟ್ ಮಾಡಿದ್ರೆ ಮತ್ತೊಂದಷ್ಟು ಮಂದಿ ಮೆಚ್ಚುಗೆ ಸೂಚಿಸಿದ್ದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now