ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಗೌರವ ಡಾಕ್ಟರೇಟ್ ಸ್ವೀಕರಿಸಿದ ಭಾವುಕರಾದ ನಟ ರಮೇಶ್ ಅರವಿಂದ್
ನನಗೆ ಈ ಪ್ರಶಸ್ತಿ ಬರಲು ಕಾರಣ ಸಿನಿಮಾ. ಸಿನಿಮಾ ನನಗೆ ಎಲ್ಲವನ್ನೂ ಕೊಟ್ಟಿದೆ. ಅದ್ಭುತ ಸಿನಿಮಾ, ಅದ್ಭುತ ಪಾತ್ರಗಳನ್ನು ಕೊಟ್ಟಿದೆ. ಅದ್ಭುತವಾದ ನಟ, ನಟಿಯರ ಜೊತೆ ಅಭಿನಯಿಸುವ ಅವಕಾಶ ಕೊಟ್ಟಿದೆ. ನನಗೆ ಅನುಕೂಲವಾದ ಜೀವನವನ್ನು ಸಿನಿಮಾ ಮಾಡಿ ಕೊಟ್ಟಿದೆ. ಶ್ರೇಷ್ಠವಾದ ಡೈರೆಕ್ಟರ್‌ಗಳು, ಸಿನಿಮಾಟೋಗ್ರಾಫರ್, ಮ್ಯೂಸಿಕ್ ಡೈರೆಕ್ಟರ್, ಗ್ರೇಟ್ ಟೆಕ್ನಿಷಿಯನ್ ಜೊತೆ ಸೇರಿ ದೃಶ್ಯ ಕಾವ್ಯ ಮಾಡುವ ಅವಕಾಶ ಸಿನಿಮಾ ನನಗೆ ಕೊಟ್ಟಿದೆ. ಮೂರು ದಶಕಗಳ ಕಾಲ ನೀವು ನನ್ನ ಸ್ನೇಹಿತರಾಗಿದ್ದೀರಿ. ಸಿನಿಮಾ ರಂಗದಲ್ಲಿ ನನಗೆ ಅವಕಾಶ ಕೊಟ್ಟ ಎಲ್ಲ ಮಹನೀಯರಿಗೆ ಧನ್ಯವಾದ. ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು.
ಸಿನಿಮಾ ಅನ್ನೋದು ಬಿಟ್ರೆ ನನ್ನ ಪುಟ್ಟ ಜಗತ್ತು ನನ್ನ ಫ್ಯಾಮಿಲಿ.ನನ್ನ ಅಮ್ಮ, ಹೆಂಡತಿ, ಮಗ, ಮಗಳು, ಅಳಿಯ ಸೇರಿ ಈ ಫ್ಯಾಮಿಲಿ ದೊಡ್ಡ ಸಪೋರ್ಟ್ ನನಗೆ. ಇಲ್ಲಿ ನೆಮ್ಮದಿ ಇಲ್ಲ ಅಂದ್ರೆ ಸಿನಿಮಾ ಜಾಗದಲ್ಲಿ ನಾನು ಏನು ಮಾಡಲಾಗುತ್ತಿರಲಿಲ್ಲ. ನನ್ನ ಕುಟುಂಬದವರಿಗೆ ಧನ್ಯವಾದಗಳು. ಮೂರನೇಯದ್ದು ನೀವು, ನಾನು ಮೊದಲ ಮಾಡಿದ ಸುಂದರ ಸ್ವಪ್ನ ಚಿತ್ರ, ಮೌನಗೀತೆಯಿಂದ ಮಧುಮಾಸವರೆಗೂ ನೀವು ನನಗೆ ಸೈ ಎಂದಿದ್ದೀರಿ. ನಮ್ಮೂರ ಮಂದಾರ ಹೂವೇ, ಅಮೃತ ವರ್ಷಿಣಿ, ಅಮೆರಿಕ ಅಮೆರಿಕ, ಉಲ್ಟಾಪಲ್ಟಾ ಚಿತ್ರ ಬಂದಾಗ ನನ್ನ ಬೆನ್ನು ತಟ್ಟಿದೀರಿ.ಆಪ್ತಮಿತ್ರ,ರಾಮ ಶ್ಯಾಮ ಭಾಮ, ವೀಕೆಂಡ್ ವಿಥ್ ರಮೇಶ್ ಶೋ ಮಾಡಿದೆ ಆಗಲೂ ನೀವು ನನ್ನ ಜೊತೆಗಿದ್ರಿ. ನೀವು ನನ್ನ ಕೈ ಬಿಡಲಿಲ್ಲ, ಹಾಗಾಗಿ 30 ವರ್ಷ ನಾನಿಲ್ಲಿದೀನಿ ಇದಕ್ಕೆಲ್ಲ ಕಾರಣ ನೀವು. ಟಿಕೆಟ್ ತೆಗೆದುಕೊಂಡು ಚಿತ್ರ ನೋಡಿದ ಪ್ರತಿ ಪ್ರೇಕ್ಷಕನಿಗೂ ನನ್ನ ಧನ್ಯವಾದಗಳು’ ಎಂದು ನಟ ರಮೇಶ್ ಅರವಿಂದ್ ತಮ್ಮ ಸಕ್ಸಸ್ ಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದರು.
