• January 1, 2026

ಹುಟ್ಟುಹಬ್ಬದ ಸಂಭ್ರಮದಲ್ಲಿ ನಿರೂಪ್ ಭಂಡಾರಿ: ನೆಚ್ಚಿನ ನಟನಿಗೆ ಶುಭಾಶಗಳ ಸುರಿಮಳೆ

ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ ನಿರೂಪ್ ಭಂಡಾರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 38ನೇ ವರ್ಷಕ್ಕೆ ಕಾಲಿಟ್ಟಿರೋ ನಿರೂಪ್ ಭಂಡಾರಿಗೆ ಅಭಿಮಾನಿಗಳು ಶುಭಾಷಯ ಕೋರಿದ್ದಾರೆ. ಆಗಸ್ಟ್ 13ರಂದು ಪುತ್ತೂರಿನಲ್ಲಿ ಜನಿಸಿದ ನಿರೂಪ್ ಭಂಡಾರಿ ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದವರು. ನಿರೂಪ್ ಭಂಡಾರಿ ತಂದೆ ಸುಧಾಕರ್ ಭಂಡಾರಿ ನಿರ್ದೇಶಕರಾಗಿದ್ದು ಅಣ್ಣ ಅನೂಪ್ ಭಂಡಾರಿ ನಿರ್ದೇಶಕ, ಸಂಗೀತ ನಿರ್ದೇಶಕ ಹಾಗೂ ಸಾಹಿತಿಯಾಗಿ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಎಂಜಿನಿಯರಿಂಗ್ ಪದವೀಧರರಾದ ನಿರೂಪ್ ಭಂಡಾರಿ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಬಣ್ಣದ ಬದುಕನ್ನು. ರತನ್ ಠಾಕೋರ್ ಗ್ರಾಂಟ್ ನಲ್ಲಿ ನಟನಾ ತರಬೇತಿ ಪಡೆದ ನಿರೂಪ್ ಭಂಡಾರಿ ಮೊದಲು ಧಾರವಾಹಿಗಳಲ್ಲಿ ಬಣ್ಣ ಹಚ್ಚಿದ್ದರು. ಧಾರವಾಹಿಯಲ್ಲಿ ಅಡ್ವೋಕೇಟ್ ಅರ್ಜುನ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ನಿರೂಪ್ ಬಳಿಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟರು. 2015ರಲ್ಲಿ ತೆರೆಕಂಡ ರಂಗಿತರಂಗ ಸಿನಿಮಾದ ಮೂಲಕ ಚಂದನವನದಲ್ಲಿ ನಾಯಕನಾಗಿ ಗುರುತಿಸಿಕೊಂಡ ನಿರೂಪ್ ಭಂಡಾರಿ ಮೊದಲ ಸಿನಿಮಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದರು. ಆ ಬಳಿಕ ರಾಜರಥ ಹಾಗೂ ಆದಿ ಲಕ್ಷ್ಮಿ ಪುರಾಣ, ವಿಂಡೋ ಸೀಟ್ ನಲ್ಲೂ ಗುರುತಿಸಿಕೊಂಡರು. ಸದ್ಯ ಸುದೀಪ್ ಜೊತೆ ವಿಕ್ರಾಂತ್ ರೋಣ ಸಿನಿಮಾದಲ್ಲಿ ನಟಿಸಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿರೋ ನಿರೂಪ್ ಭಂಡಾರಿ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸಲಿ ಅನ್ನೋದು ಅವರ ಅಭಿಮಾನಿಗಳ ಆಶಯ.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now