• January 1, 2026

ನಿರೂಪಕಿಗೆ ಕನ್ನಡ ಪಾಠ ಮಾಡಿದ ಕಿಚ್ಚ ಸುದೀಪ್: ವಿಡಿಯೋ ವೈರಲ್

ಕಿಚ್ಚ ಸುದೀಪ್ ಸಿನಿಮಾದಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಭಾಷಾ ಪ್ರೇಮಿ ಅನ್ನೋದು ಗೊತ್ತೇ ಇದೆ. ಸುದೀಪ್ ಮಾತು ಕೇಳೋದಕ್ಕಾಗಿಯೇ ಅದೆಷ್ಟೋ ಮಂದಿ ಟಿವಿ ಮುಂದೆ ಕುಳಿತುಕೊಳ್ತಾರೆ. ಈ ಹಿಂದೆ ಬಿಟೌನ್ ನಟ ಅಜಯ್ ದೇವಗನ್ ಗೆ ರಾಷ್ಟ್ರಭಾಷೆಯ ಪಾಠ ಮಾಡಿದ್ದ ಸುದೀಪ್ ಇದೀಗ ನಿರೂಪಕಿಗೆ ಕನ್ನಡದ ಬಗ್ಗೆ ಹೇಳಿಕೊಟ್ಟಿದ್ದಾರೆ. ಇತ್ತೀಚೆಗೆ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ವಿಕ್ರಾಂತ್ ರೋಣ ಸಿನಿಮಾದ ಪ್ರಚಾರದ ವೇಳೆ ಸುದೀಪ್ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ಸಂದರ್ಶನದಲ್ಲಿ ನಿರೂಪಕಿಯೊಬ್ಬರು ಕನ್ನಡವನ್ನು ಕನ್ನಡ್ ಎಂದಿದ್ದಾರೆ. ನಿರೂಪಕಿ ಕನ್ನಡ್ ಎನ್ನುತ್ತಿದ್ದಂತೆ ಸುದೀಪ್ ಆಕೆಗೆ ಕನ್ನಡ ಪಾಠ ಮಾಡಿದ್ದಾರೆ. ನಿರೂಪಕಿ ತೆಲುಗು, ತಮಿಳು, ಮಲಯಾಳಂಮ ಕನ್ನಡ್ ಎನ್ನುತ್ತಿದ್ದಂತೆ ಸುದೀಪ್ ಕನ್ನಡ್ ಅಲ್ಲ ಮೇಡಂ ಕನ್ನಡ. ಹೇಗೆ ಹಿಂದಿ ಹಿಂದ್ ಆಗಲ್ವೋ ಅದೇ ರೀತಿ ಕನ್ನಡ ಕನ್ನಡ್ ಆಗಲ್ಲ. ನೀವು ನಮ್ಮ ಭಾಷೆ ಕಲಿಯಿರಿ. ಭಾಷೆ ಬಿಡಿ ಅದರ ಹೆಸರನ್ನಾದರೂ ಸರಿಯಾಗಿ ಹೇಳಿ. ತಮಿಳು ಸರಿಯಾಗಿ ಹೇಳ್ತಿರಿ. ತೆಲುಗು ಸರಿಯಾಗಿ ಹೇಳ್ತಿರಿ. ಆದರೆ ಕನ್ನಡವನ್ನು ಕನ್ನಡ್ ಅಂತೀರಾ. ಅದು ಕನ್ನಡ್ ಅಲ್ಲ ಕನ್ನಡ ಎಂದಿದ್ದಾರೆ. ಸುದೀಪ್ ಕನ್ನಡ ಪಾಠಕ್ಕೆ ಅಭಿಮಾನಿಗಳ ಜೈ ಎಂದಿದ್ದಾರೆ. ಕನ್ನಡದವರೇ ಕನ್ನಡ ಮಾಡೋಕೆ ಹಿಂದೂ ಮುಂದೂ ನೋಡುತ್ತಿರುವ ಸಂದರ್ಭದಲ್ಲಿ ಸುದೀಪ್ ಕನ್ನಡದ ಬಗ್ಗೆ ನಿರೂಪಕಿಗೆ ಪಾಠ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now