• March 17, 2026

ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನಡೆದ ಧೃವ ಸರ್ಜಾ ಪತ್ನಿ ಪ್ರೇರಣ ಸೀಮಂತ

ಸ್ಯಾಂಡಲ್ ವುಡ್ ನಟ ಧೃವ ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಧೃವ ಸರ್ಜಾ ಹಾಗೂ ಪ್ರೇರಣ ದಂಪತಿ ಮುದ್ದು ಮಗುವಿನ ಆಗಮನಕ್ಕೆ ಎದುರು ನೋಡುತ್ತಿದ್ದು ಈ ವಿಷಯವನ್ನು ಕೆಲ ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ದಂಪತಿಗಳು ಹಂಚಿಕೊಂಡಿದ್ದರು. ಇದೀಗ ಪ್ರೇರಣರ ಅದ್ದೂರಿ ಸೀಮಂತ ಕಾರ್ಯ ಮಾಡಲಾಗಿದೆ. ಇತ್ತೀಚೆಗೆ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದ ಪ್ರೇರಣ ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ನಟ ಧೃವ ಸರ್ಜಾ ಕೂಡ ಬೇಬಿ ಬಂಪ್ ವಿಡಿಯೋವನ್ನು ಹಂಚಿಕೊಂಡು ಆಗಮಿಸಲಿರುವ ಮುದ್ದು ಮಗುವಿಗೆ ನಿಮ್ಮ ಆಶೀರ್ವಾದವಿರಲಿ ಎಂದು ಕೇಳಿಕೊಂಡಿದ್ದರು. ಇದೀಗ ನಗರದ ಖಾಸಗಿ ಹೋಟೆಲ್ ನಲ್ಲಿ ಸರ್ಜಾ ಕುಟುಂಬಸ್ಥರು, ಪ್ರೇರಣ ಕುಟುಂಬಸ್ಥರು ಹಾಗೂ ಕೆಲ ಆಪ್ತರ ಸಮ್ಮುಖದಲ್ಲಿ ಅದ್ದೂರಿ ಸೀಮಂತ ಕಾರ್ಯ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿ ಸೀಮಂತ ಶಾಸ್ತ್ರ ಮಾಡಲಾಗಿದ್ದು ಈ ವೇಳೆ ಧೃವ ಸರ್ಜಾ ಅಣ್ಣನನ್ನು ನೆನಪು ಮಾಡಿಕೊಂಡು ಬೇಸರಗೊಂಡಿದ್ದಾರೆ. ಯಾವುದೇ ಸಮಾರಂಭದಲ್ಲೂ ಖುಷಿ ಖುಷಿಯಾಗಿ ಭಾಗಿಯಾಗುತ್ತಿದ್ದಅಣ್ಣ ತಮ್ಮಂದಿರು ಭಾಗಿಯಾಗುತ್ತಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಚಿರಂಜೀವಿ ಸರ್ಜಾ ಇಲ್ಲದೆ ಇರುವುದು ಧೃವ ಸರ್ಜಾಗೆ ನೋವು ತರಿಸಿದೆ. ಈಗಾಗಲೇ ಸರ್ಜಾ ಕುಟುಂಬಕ್ಕೆ ರಾಯನ್ ರಾಜ್ ಸರ್ಜಾ ಆಗಮನದಿಂದ ಖುಷಿಯಾಗಿದೆ. ಇದೀಗ ಮತ್ತೊಂದು ಮುದ್ದು ಮಗು ಆಗಮನಕ್ಕೆ ಇಡೀ ಕುಟುಂಬವೇ ಎದುರು ನೋಡುತ್ತಿದೆ. ಪ್ರೇರಣ ಸೀಮಂತ ಕಾರ್ಯದಲ್ಲಿ ಸಿನಿಮಾ ರಂಗದ ಆಪ್ತರು, ಸರ್ಜಾ ಕುಟುಂಬಸ್ಥರು, ಪ್ರೇರಣಾ ಕುಟುಂಬಸ್ಥರು, ಮೇಘನಾ ರಾಜ್ ಸೇರಿದಂತೆ ಸಾಕಷ್ಟು ಮಂದಿ ಹಾಜರಿದ್ದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now