• March 17, 2026

ಹೆಣ್ಣು ಮಗುವಿನ ತಂದೆಯಾದ ಕಿರುತೆರೆ ನಟ ಚಂದು ಗೌಡ

ಲಕ್ಷ್ಮೀ ಬಾರಮ್ಮ ಧಾರವಾಹಿ ಮೂಲಕ ಕನ್ನಡದಲ್ಲಿ ಸದ್ದು ಮಾಡಿ ಬಳಿಕ ತೆಲುಗು ಕಿರುತೆರೆಯಲ್ಲೂ ಬ್ಯುಸಿಯಾಗಿರೋ ನಟ ಚಂದು ಗೌಡ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಚಂದು ಗೌಡ ಮನೆಗೆ ಪುಟ್ಟ ಲಕ್ಷ್ಮೀಯ ಆಗಮನವಾಗಿದೆ. ಚಂದು ಪತ್ನಿ ಶಾಲಿನಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ. ಸಾಕಷ್ಟು ಸಿನಿಮಾ ಹಾಗೂ ಸೀರಿಯಲ್ ಮೂಲಕ ಸಂಚಲನ ಮೂಡಿಸಿರುವ ಚಂದು ಗೌಡ 2020ರಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಶಾಲಿನಿ ಅವರ ಜೊತೆ ಚಂದು ಸಪ್ತಪದಿ ತುಳಿದರು. ಇತ್ತೀಚೆಗೆ ಶಾಲಿನಿ ಅವರ ಅದ್ದೂರಿ ಸೀಮಂತ ಕಾರ್ಯಕ್ರಮ ಮಾಡಿದ್ದು ಅದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಸುಮಾರು ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಚಂದು ಹಾಗೂ ಶಾಲಿನಿ ಬಾಳಿಗೆ ಇದೀಗ ಹೊಸ ಅತಿಥಿಯ ಆಗಮನ ಮತ್ತಷ್ಟು ಖುಷಿ ನೀಡಿದೆ. ಚಂದು ಗೌಡ ಪತ್ನಿ ಶಾಲಿನಿ ನಿನ್ನೆ (ಆಗಸ್ಟ್ 14)ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿನ ಜನನವಾಗಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now