ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಶಿವಾಜಿ ನಗರದ ಮಿಲಿಟರಿ ಹೋಟೆಲ್ ನಲ್ಲಿ ಕಾಣಿಸಿಕೊಂಡ ನಟ ಆಶಿಷ್ ವಿದ್ಯಾರ್ಥಿ
ಸಾಕಷ್ಟು ಸಮಯದ ಬಳಿಕ ಆಶಿಷ್ ವಿದ್ಯಾರ್ಥಿ ಕರ್ನಾಟಕದಲ್ಲಿ ಕಾಣಿಸಿಕೊಂಡಿದ್ದಾರೆ. ಆಶಿಷ್ ವಿದ್ಯಾರ್ಥಿ ಕರ್ನಾಟದಲ್ಲಿ ಕಾಣಿಸಿಕೊಂಡಿರೋದು ಸಿನಿಮಾಗಾಗಿ ಅಲ್ಲ. ಬದಲಾಗಿ ಊಟದ ವಿಚಾರಕ್ಕೆ. ಆಶಿಷ್ ವಿದ್ಯಾರ್ಥಿ ಆಹಾರ ಪ್ರೀಯರಾಗಿದ್ದು, ಇದಕ್ಕಾಗಿಯೇ ಯೂಟ್ಯೂಬ್ ವಾಹಿನಿಯನ್ನು ಸಹ ಮಾಡಿದ್ದಾರೆ. ತನ್ನಿಷ್ಟದ ಊಟದ ಬಗ್ಗೆ ಆಶಿಷ್ ವಿಲಾಗ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ದೇಶದ ವಿವಿದ ಪ್ರದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ಫೇಮಸ್ ಹೋಟೆಲ್ಗೆ ಹೋಗಿ ಊಟ ಸವಿದು ತನ್ನ ಅಭಿಮಾನಿಗಳಿಗೂ ತಿಳಿಸುತ್ತಾರೆ.
ಆಶಿಷ್ ವಿದ್ಯಾರ್ಥಿ ಈ ಭಾರಿ ಅವರ ವಿಲಾಗ್ ನಲ್ಲಿ ಬೆಂಗಳೂರಿನ ಶಿವಾಜಿ ನಗರದಲ್ಲಿನ ಒಂದು ಪುಟ್ಟ ಮಿಲಿಟರಿ ಹೋಟೆಲ್ ಊಟದ ಬಗ್ಗೆ ವಿವರಿಸಿದ್ದಾರೆ. ಊಟ ಮಾಡುತ್ತಾ ಆ ಹೋಟೆಲ್ನ ವಿಶೇಷತೆ ಮತ್ತು ಅಲ್ಲಿನ ಆಹಾರದ ರುಚಿಯನ್ನು ವೀಕ್ಷಕರಿಗೆ ತಿಳಿಸಿದ್ದಾರೆ. ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಮಿಲಿಟರಿ ಹೋಟೆಲ್ ನಲ್ಲಿ ಆಹಾರದ ರುಚಿ ಇದೆ ಎಂದಿರುವ ಆಶಿಷ್ ವಿದ್ಯಾರ್ಥಿ, ಹೋಟೆಲ್ ನಲ್ಲಿ ದೊನ್ನೆ ಬಿರಿಯಾನಿ, ಚಿಕನ್ ಕರಿ, ಮಟನ್ ಸುಕ್ಕಾ, ಪಾಯಾ ಸೂಪ್ ಸೇವಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗೂ ಒಮ್ಮೆ ಟ್ರೈ ಮಾಡಿ ಎಂದಿದ್ದಾರೆ. ಈ ವಿಡಿಯೋವನ್ನು ಆಶಿಷ್ ಕೂ ನಲ್ಲೂ ಹಂಚಿಕೊಂಡಿದ್ದಾರೆ.
