• March 14, 2026

ಕಾರು ಅಪಘಾತಕ್ಕೆ ಬಲಿಯಾದ ಹಾಲಿವುಡ್ ಖ್ಯಾತ ನಟಿ: ಅಂಗಾಗ ದಾನಕ್ಕೆ ಮುಂದಾದ ಕುಟುಂಬಸ್ಥರು

ಹಾಲಿವುಡ್ ಖ್ಯಾತ ನಟಿ ಅನ್ನೆ ಹೆಚ್ಚೆ ಕಾರು ಲಾಸ್ ಏಂಜಲೀಸ್ ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಕಳೆದ ಒಂದು ವಾರದಿಂದ ಕೋಮದಲ್ಲಿದ್ದ ನಟಿ ಕಾನೂನು ಬದ್ಧವಾಗಿ ಮೃತಪಟ್ಟಿರುವುದಾಗಿ ಅನ್ನೆ ಹೆಚ್ಚೆ ವಕ್ತಾರರು ತಿಳಿಸಿದ್ದಾರೆ. ಆಗಸ್ಟ್ 5ರಂದು ವಿಪರೀತ ಡ್ರಗ್ಸ್ ಸೇವಿಸಿ ಕಾರು ಚಲಿಸಿದ ಪರಿಣಾಮ ಅನ್ನೆ ಹೆಚ್ಚೆ ಅಪಘಾತಕ್ಕೀಡಾಗಿತ್ತು. ಕಾರು ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿ ದಡ್ಡ ಬೆಂಕಿ ಆವರಿಸಿಕೊಂಡಿತ್ತು. ಈ ವೇಳೆ ಸ್ಥಳಿಯರು ನಟಿಗೆ ಸಹಾಯ ಮಾಡಲು ಮುಂದಾದರೂ ದಡ್ಡ ಬೆಂಕಿಯ ಪರಿಣಾಮ ಸಾಧ್ಯವಾಗಿರಲಿಲ್ಲ. ಕೂಡಲೇ ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಆಗಮಿಸಿ ನಟಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ಸುಟ್ಟ ಗಾಯಗಳಿಂದ ನಟಿ ಅನ್ನೆ ಹೆಚ್ಚೆ ಕೋಮ ಸ್ಥಿತಿ ತಲುಪಿದ್ದರು. ಅಪಘಾತದಲ್ಲಿ ಅನ್ನೆ ಹೆಚ್ಚೆ ಅವರ ಮೆದುಳು ನಿಷ್ಕ್ರೀಯಗೊಂಡಿದ್ದು, ಕ್ಯಾಲಿಫೋರ್ನಿಯಾ ಕಾನೂನು ಪ್ರಕರಣ ಕಾನೂನು ಬದ್ಧವಾಗಿ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಸದ್ಯ ಕುಟುಂಬ ಸದಸ್ಯರು ಅನ್ನೆ ಹೆಚ್ಚೆ ಅವರ ಅಂಗಾಗ ದಾನ ಮಾಡಲು ಮುಂದಾಗಿದ್ದಾರೆ. ನಟಿ ಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು, ನಟಿಯು ಕೊಕೇನ್ ಮಾದಕ ವಸ್ತು ಸೇವಿಸಿ ಕಾರು ಚಲಾಯಿಸುತ್ತಿದ್ದುದಾಗಿ ಧೃಡಪಟ್ಟಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now