ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸುಮಲತಾ ಹುಟ್ಟುಹಬ್ಬಕ್ಕೆ ಅಭಿಷೇಕ್ ಅಂಬರೀಶ್ ನಟನೆಯ ಹೊಸ ಸಿನಿಮಾದ ಪೋಸ್ಟರ್ ರಿಲೀಸ್
ಅಂಬರೀಶ್ ಅವರ ಹುಟ್ಟು ಹಬ್ಬದಂದು ಘೋಷಣೆಯಾಗಿದ್ದ ಅಭಿಷೇಕ್ ಅಂಬರೀಶ್ ಅವರ ಈ ಸಿನಿಮಾದ ಮುಹೂರ್ತ ಇಂದು ಅಂಬರೀಶ್ ಅವರ ಸಮಾಧಿ ಹತ್ತಿರ ನೆರವೇರಿತು. ಇವತ್ತು ಸುಮಲತಾ ಅಂಬರೀಶ್ ಅವರ ಹುಟ್ಟು ಹಬ್ಬವಾಗಿದ್ದರಿಂದ ಈ ಸಂದರ್ಭವನ್ನು ಸಿನಿಮಾ ತಂಡ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು ನಿರ್ಮಾಪಕರ ಹೆಸರು ತಿಳಿಸಿದೆ.
ಅಭಿಷೇಕ್ ಅಂಬರೀಶ್ ನಟನೆಯ ನಾಲ್ಕನೇ ಸಿನಿಮಾವನ್ನು ಅಯೋಗ್ಯ ಹಾಗೂ ಮದಗಜ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ರಾಕ್ ಲೈನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಈ ವರ್ಷ ಈಗಾಗಲೇ ಎರಡು ಸಿನಿಮಾಗಳನ್ನು ಘೋಷಣೆ ಮಾಡಿರುವ ರಾಕ್ ಲೈನ್ ಸಂಸ್ಥೆ, ಸುಮಲತಾ ಅವರ ಹುಟ್ಟು ಹಬ್ಬಕ್ಕಾಗಿ ಅವರ ಪುತ್ರ ಅಭಿಷೇಕ್ ಅವರ ಹೊಸ ಸಿನಿಮಾವನ್ನೂ ತಯಾರು ಮಾಡುತ್ತಿರುವುದಾಗಿ ತಿಳಿಸಿದೆ.
ದುನಿಯಾ ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ನಂತರ ಅಭಿಷೇಕ್ ಈ ಚಿತ್ರಕ್ಕೆ ಸೈನ್ ಮಾಡಿದ್ದು, ಪಿರಿಯಡ್ ಡ್ರಾಮಾ ಕಥೆಯಲ್ಲಿ ಯಂಗ್ ರೆಬೆಲ್ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಗೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಸದ್ಯಕ್ಕೆ ‘AA04’ ಎಂದು ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಈ ಚಿತ್ರದಲ್ಲಿ ಅಭಿಷೇಕ್ ಹೋರಾಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ.
