ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮಿಸ್ ಇಂಡಿಯಾ USA 2022 ಕಿರೀಟ ಮುಡಿಗೇರಿಸಿಕೊಂಡ 18 ವರ್ಷದ ಆರ್ಯ ವಾಲ್ವೇಕರ್
ಕಿರೀಟ ಗೆದ್ದ ಸಂಭ್ರಮವನ್ನು ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿರುವ ಆರ್ಯ ವಾಲ್ಟೇಕರ್, `ನನ್ನನ್ನು ಬೆಳ್ಳಿ ತೆರೆಯಲ್ಲಿ ನೋಡುವುದು, ಚಲನಚಿತ್ರ ಹಾಗೂ ಟಿವಿಯಲ್ಲಿ ಕೆಲಸ ಮಾಡುವುದು ನನ್ನ ಕನಸಾಗಿತ್ತು’. ಪ್ರಪಂಚದಾದ್ಯಂತ ಇರುವ ಭಾರತೀಯ ಸಮುದಾಯಕ್ಕೆ, ಅವರು ನೀಡಿದ ಸಹಕಾರಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
18ವರ್ಷದ ಆರ್ಯ ವಾಲ್ವೇಕರ್ ವರ್ಜೀನಿಯಾದ ಬ್ರಿಯಾರ್ ವುಡ್ಸ್ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿನಿ. ಯುಫೋರಿಯಾ ಡ್ಯಾನ್ಸ್ ಸ್ಟುಡಿಯೋದ ಸಂಸ್ಥಾಪಕರಾಗಿರುವ ಆರ್ಯ ವಾಲ್ವೇಕರ್ ಸ್ಥಳೀಯ ಮಕ್ಕಳಿಗೆ ಕಡಿಮೆ ಶುಲ್ಕದಲ್ಲೇ ನೃತ್ಯ ಹೇಳಿಕೊಡುತ್ತಿದ್ದಾರೆ.
