• June 20, 2026

ಫಿಸಿಕಲ್ ಟ್ರೈನರ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡ ಅಮೀರ್ ಖಾನ್ ಪುತ್ರಿ ಇರಾ ಖಾನ್

ಬಾಲಿವುಡ್ ಮಿಸ್ಟರ್ ಫರ್ಫೆಕ್ಷನಿಸ್ಟ್ ಅಮೀರ್ ಖಾನ್ ಪುತ್ರಿ ಇರಾ ಖಾನ್ ಇತ್ತೀಚೆಗೆ ಹಾಟ್ ಫೋಟೋಗಳನ್ನು ಹಂಚಿಕೊಂಡು ಸುದ್ದಿಯಾಗಿದ್ದರು. ಇದೀಗ ಇರಾ ಮತ್ತೆ ಸದ್ದು ಮಾಡುತ್ತಿದ್ದು ಸಾಕಷ್ಟು ವರ್ಷಗಳಿಂದ ಪ್ರೀತಿಸುತ್ತಿರುವ ತಮ್ಮ ಫಿಸಿಕಲ್ ಟ್ರೈನರ್ ಕೈಗೆ ಉಂಗುರ ತೊಡಿಸಿ ಮುತ್ತಿಡುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಸುತ್ತಿರುವ ಇರಾ ಖಾನ್ ಹಾಗೂ ನೂಪುರ್ ಶಿಖಾರೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಪ್ರೀತಿಸುತ್ತಿರುವಾಗಲೇ ಒಟ್ಟಿಗೆ ವಾಸವಿದ್ದ ಈ ಜೋಡಿ ಹಕ್ಕಿಗಳು ಇದೀಗ ಅಧಿಕೃತವಾಗಿ ಸತಿ ಪತಿಯಾಗಲು ಮುಂದಾಗಿದ್ದಾರೆ. ಇರಾ ಖಾನ್ ಹಲವು ವರ್ಷಗಳಿಂದ ತಮ್ಮ ಫಿಸಿಕಲ್ ಟ್ರೈನರ್ ನೂಪುರ್ ಅನ್ನು ಇಷ್ಟಪಡುತ್ತಿದ್ದರು. ನೂಪುರ್ ಜೊತೆ ಸಾಕಷ್ಟು ಟ್ರಿಪ್ ಹೋಗಿ ಬಂದಿರುವ ನೂಪುರ್ ಒಂದೇ ಮನೆಯಲ್ಲಿ ಸಾಕಷ್ಟು ದಿನಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ಅದಕ್ಕೀಗ ಫುಲ್ ಸ್ಟಾಪ್ ಸಿಕ್ಕಿದ್ದು ಇಬ್ಬರು ಹಸೆಮಣೆ ಏರಿ ಅಧಿಕೃತವಾಗಿ ಗಂಡ, ಹೆಂಡತಿಯಾಗೋ ನಿರ್ಧಾರ ಮಾಡಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಇರಾ ಖಾನ್ ಬರ್ತಡೇಯನ್ನು ಈಜೂ ಕೊಳದಲ್ಲಿ ಆಚರಿಸಿಕೊಂಡಿದ್ದರು.ಈ ವೇಳೆ ನೂಪುರ್ ಶಿಖಾರೆ ಕೂಡ ಹಾಜರಿದ್ದು ಇಬ್ಬರು ತಬ್ಬಿಕೊಂಡು ಫೋಟೋಗೆ ಫೋಸ್ ನೀಡಿದ್ದರು.  ಅಲ್ಲದೆ ಆ ಫೋಟೋಗಳನ್ನು ಇರಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now