• March 16, 2026

ಅಮೀರ್ ಖಾನ್ ಗೆ ಮತ್ತೆ ಸಂಕಷ್ಟ: ಮುಂದಿನ ಸಿನಿಮಾದಿಂದ ಹಿಂದೆ ಸರಿದ ನಿರ್ಮಾಪಕರು

ಬಾಲಿವುಡ್ ಚಿತ್ರರಂಗದ ಸ್ಟಾರ್ ನಟ ಅಮೀರ್ ಖಾನ್ ನಟನೆಯ ಸಿನಿಮಾಗಳು ಸತತವಾಗಿ ಸೋಲು ಕಾಣುತ್ತಿವೆ. ಇತ್ತೀಚೆಗೆ ಬಿಡುಗಡೆ ಆದ ಲಾಲ್ ಸಿಂಗ್ ಚಡ್ಡಾ ಸಿನಿಮಾ  ಬಾಯ್ ಕಾಟ್ ಗೆ ಬಲಿಯಾಗಿದೆ. ಇದೀಗ ಅಮೀರ್ ಗೆ ಮತ್ತೊಂದು ಶಾಕ್ ಎದುರಾಗಿದೆ. ಅಮೀರ್ ನಟನೆಯ ಸಿನಿಮಾಗಳನ್ನು ಸಿನಿ ಪ್ರೇಕ್ಷಕರು ಬ್ಯಾನ್ ಮಾಡುತ್ತಿದ್ದಂತೆ ಅಮೀರ್ ಮುಂದಿನ ಸಿನಿಮಾ ತಯಾರಕರು ಹಿಂದೆ ಸರಿದಿದ್ದಾರೆ. ಅಮೀರ್ ಗುಲ್ಶನ್ ಕುಮಾರ್ ಹೆಸರಿನಲ್ಲಿ ಸಿನಿಮಾ ಮಾಡಬೇಕಿತ್ತು. ಕ್ಯಾಸೆಟ್ ಕಿಂಗ್ ಹೆಸರಿನಲ್ಲಿ ಪ್ರಸಿದ್ಧ ಗುಲ್ಶನ್ ಕುಮಾರ್ ಅವರ ಜೀವನ ಚರಿತ್ರೆಯ ಸಿನಿಮಾವನ್ನು ಅನಿರ್ದಿಷ್ಟವಾಗಿ  ಮುಂದೂಡಲಾಗಿದೆ. ಈ ಚಿತ್ರದಲ್ಲಿ ಆಮೀರ್ ನಾಯಕನಾಗಿ ನಟಿಸಬೇಕಿತ್ತು. ಚಿತ್ರದ ನಿರ್ದೇಶಕ ಸುಭಾಷ್ ಕಪೂರ್ ಈಗ  ಜಾಲಿ ಎಲ್ಎಲ್ಬಿ 3 ರ ಕೆಲಸವನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಅಮೀರ್ ಖಾನ್ ನೀಡಿದ್ದಾರೆ ಎಂಬ ಹೇಳಿಕೆಯೊಂದರ ಕಾರಣಕ್ಕೆ 180 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಲಾಲ್ ಸಿಂಗ್ ಚಡ್ಡಾ ಬಾಕ್ಸ್  ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಅಲ್ಲದೆ ಅಮೀರ್ ನಟನೆಯ ಮುಂದಿನ ಸಿನಿಮಾ ಮೊಗಲ್ ಅನ್ನು ತಯಾರಕರು ತಡೆಹಿಡಿದಿದ್ದಾರೆ ಎನ್ನಲಾಗುತ್ತಿದೆ. ಲಾಲ್ ಸಿಂಗ್ ಚಡ್ಡಾ ಬಿಡುಗಡೆಯಾದ 14 ದಿನಗಳಲ್ಲಿ ಘಳಿಸಿರೋದು ಕೇವಲ 60 ಕೋಟಿ ಮಾತ್ರ. ಇದರಿಂದ ಚಿತ್ರ ತಂಡ ಸದ್ಯ 120 ಕೋಟಿ ನಷ್ಟ ಎದುರಿಸಿದೆ. ಗುಲ್ಶನ್ ಕುಮಾರ್ ಜೀವನಾಧಾರಿತ ಚಿತ್ರಕ್ಕೆ ಮೊಗಲ್ ಎಂದು ಹೆಸರಿಡಲಾಗಿತ್ತು. ಗುಲ್ಶನ್ ಕುಮಾರ್ ಅವರ ಪುತ್ರ ಭೂಷಣ್ ಕುಮಾರ್ ನಿರ್ಮಿಸಲಿದ್ದು,  ಚಿತ್ರದಲ್ಲಿ ನಾಯಕ ನಟನಾಗಿ ಆಮೀರ್ ನಟಿಸಲಿದ್ದರು. ಆದರೆ ಚಿತ್ರವನ್ನು ಸದ್ಯದ ಮಟ್ಟಿಗೆ ಕೈಬಿಡಲಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now