• March 16, 2026

ಅಂದು ತಾವಾಡಿದ ಮಾತಿಗೆ ಇಂದು ಕ್ಷಮೆ ಯಾಚಿಸಿದ ಅಮೀರ್ ಖಾನ್

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಆಗಸ್ಟ್ 11ರಂದು ಸಿನಿಮಾ ತೆರೆಗೆ ಬರುತ್ತಿದ್ದು ಸಿನಿಮಾವನ್ನು ಬಾಯ್ ಕಾಟ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಆಂದೋಲನೆ ಶುರುವಾಗಿದೆ. ಈ ಸಿನಿಮಾ ಬಿಡುಗಡೆಗೆ ಒಂದು ದಿನ ಭಾಕಿ ಇರುವಾಗ ಅಂದು ತಾವಾಡಿದ ಮಾತಿಗೆ ಅಮೀರ್ ಖಾನ್ ಕ್ಷಮೆ ಯಾಚಿಸಿದ್ದಾರೆ. ಅಂದು  ಅಮೀರ್ ಖಾನ್ ಆಡಿದ ಮಾತಿನಿಂದ ಅವರ ಸಿನಿಮಾಗಳನ್ನು ಬಾಯ್ ಕಾಟ್ ಮಾಡುವಂತೆ ಅಭಿಯಾನ ಶುರುವಾಗಿದೆ. ಅಂದು ಅಮೀರ್ ಈ ದೇಶದಲ್ಲಿ ಅಸಹಿಷ್ಣುತೆ ಇದೆ. ಹಾಗಾಗಿ ನನ್ನ ಪತ್ನಿ ದೇಶ ತೊರೆಯುವಂತಹ ಮಾತುಗಳನ್ನು ಆಡಿದ್ದಳು ಎಂದು ಅಮೀರ್ ಹೇಳಿದ್ದರು. ಅಮೀರ್ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಅಲ್ಲದೆ ಅಮೀರ್ ರನ್ನು ದೇಶದಿಂದ ಹೊರ ಹಾಕಬೇಕು ಎಂಬ ಮಾತುಗಳು ಕೇಳಿ ಬಂದಿತ್ತು. ಇದೀಗ ಅಮೀರ್ ಸಿನಿಮಾವೊಂದು ಬಿಡುಗಡೆ ಆಗುತ್ತಿರುವ ಹೊತ್ತಿನಲ್ಲಿ ಅಮೀರ್ ಸಿನಿಮಾ ನೋಡಬೇಡಿ ಎಂದು ಹಲವರು ಪೋಸ್ಟ್ ಮಾಡಿದ್ದಾರೆ. ಈ ಬೆನ್ನಲ್ಲೇ ಅಮೀರ್ ಕ್ಷಮೆ ಕೇಳಿದ್ದಾರೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದಿಸುತ್ತೇನೆ, ನಾನು ಯಾರನ್ನೂ ನೋಯಿಸಲು ಬಯಸುವುದಿಲ್ಲ, ಯಾರಾದರೂ ಚಲನಚಿತ್ರವನ್ನು ವೀಕ್ಷಿಸಲು ಬಯಸದಿದ್ದರೆ, ನಾನು ಅವರ ಭಾವನೆಯನ್ನು ಗೌರವಿಸುತ್ತೇನೆ ಎಂದಿದ್ದಾರೆ. ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಬಾಯ್ ಕಾಟ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಅಂದೋಲನ ಶುರುವಾಗಿದ್ದರು ಸಿನಿಮಾ ಮಾತ್ರ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ಬಿಡುಗಡೆಗೂ ಮುನ್ನವೇ ಭರ್ಜರಿ ಬಿಸ್ನೆಸ್ ಮಾಡ್ತಿರುವ ಸಿನಿಮಾ ರಿಲೀಸ್ ಬಳಿಕ ಯಾವಾ ರೀತಿ ಸದ್ದು ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕು.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now