• March 14, 2026

ಜೊತೆ ಜೊತೆಯಲಿ ಧಾರಾವಾಹಿ ನಟ ಆರ್ಯವರ್ಧನ್ ಚಾಲಾಯಿಸುತ್ತಿದ್ದ ಕಾರು ಭೀಕರ ಅಪಘಾತ: ಮುಗಿದೇ ಹೋಯ್ತಾ ಅನಿರುದ್ಧ್ ನಟಿಸುತ್ತಿದ್ದ ಪಾತ್ರ?

ಕಳೆದ ಕೆಲ ದಿನಗಳಿಂದ ಜೊತೆ ಜೊತೆಯಲಿ ಧಾರಾವಾಹಿ ಸೆಟ್ ನಲ್ಲಿ ನಡೆಯುತ್ತಿದ್ದ ಗದ್ದಲಕ್ಕೆ ಕೊನೆಗೂ ನಿರ್ದೇಶಕರು ಅಂತ್ಯ ಹಾಡಿದ್ದಾರೆ. ನಟ ಅನಿರುದ್ಧ್ ಹಾಗೂ ನಿರ್ದೇಶಕರ ನಡುವೆ ಮನಸ್ತಾಪ ಉಂಟಾಗಿದ್ದು ಈ ಕಾರಣಕ್ಕೆ ನಟ ಅನಿರುದ್ಧ್ ರನ್ನು ಧಾರಾವಾಹಿಯಿಂದ ಕೈ ಬಿಡಲಾಗಿದೆ. ಸದ್ಯ ಜೊತೆ ಜೊತೆಯಲಿ ಧಾರಾವಾಹಿ  ಪ್ರೊಮೋ ಒಂದನ್ನ ಬಿಡುಗಡೆ ಮಾಡಿದ್ದು ಅದರಲ್ಲಿ ಅನಿರುದ್ಧ್ ಪಾತ್ರವನ್ನು ಮುಗಿಸಿದ್ದಾರೆ. ಅನಿರುದ್ಧ್ ಪಾತ್ರಕ್ಕೆ ಸಾಕಷ್ಟು ಮಂದಿಯ ಹೆಸರು ಕೇಳಿ ಬಂದಿತ್ತು. ಆದರೆ ಯಾವುದೂ ಫೈನಲ್ ಆಗಿರಲಿಲ್ಲ. ಸದ್ಯ ಧಾರಾವಾಹಿ ತಂಡ ಕಥೆಯಲ್ಲೇ ಮೇಜರ್ ಬದಲಾವಣೆ ಮಾಡಿದ್ದು ಅನಿರುದ್ಧ್ ಪಾತ್ರಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಜೊತೆ ಜೊತೆಯಲಿ ತಂಡ ಹಂಚಿಕೊಂಡಿರುವ ಪ್ರೋಮೋದಲ್ಲಿ ಧಾರಾವಾಹಿ ನಾಯಕ ಆರ್ಯವರ್ಧನ್ ಸ್ಪೀಡ್ ಆಗಿ ಕಾರು ಓಡಿಸಿಕೊಂಡು ಹೋಗುತ್ತಿರುತ್ತಾರೆ. ಈ ವೇಳೆ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆರ್ಯವರ್ಧನ್ ಇದ್ದ ಕಾರು ಪಲ್ಟಿ ಹೊಡೆಯುತ್ತ ಹೋಗುತ್ತದೆ. ಈಗಾಗಲೇ ಆರ್ಯವರ್ಧನ್ ಸಹೋದರನ ಪಾತ್ರಕ್ಕೆ ಹರೀಶ್ ರಾಜ್ ಎಂಟ್ರಿಕೊಟ್ಟಿದ್ದಾರೆ. ಆರ್ಯವರ್ಧನ್ ಆಕ್ಸಿಡೆಂಟ್ ಹಿಂದೆ ಹರೀಶ್ ರಾಜ್ ಕೈವಾಡವಿದೆಯಾ? ಆ ಮೂಲಕ ಸಾಕಷ್ಟು ಸಾಲ ಮಾಡಿಕೊಂಡಿರುವ ಹರೀಶ್ ರಾಜ್ ಅಧಿಪತಿ ಆಗಲು ನೋಡುತ್ತಿದ್ದಾರಾ ಎಂಬ ಅನುಮಾನ ಪ್ರೋಮೋ ನೋಡಿದ್ರೆ ಅನಿಸುತ್ತೆ. ಆಕ್ಸಿಡೆಂಟ್ ಬಳಿಕ ಆರ್ಯವರ್ಧನ್ ಮುಖಕ್ಕೆ ಪ್ಲ್ಯಾಸ್ಟಿಕ್ ಸರ್ಜರಿ ಮಾಡುತ್ತಾರಾ? ಆರ್ಯವರ್ಧನ್ ಪಾತ್ರಕ್ಕೆ ಮತ್ಯಾರೋ ಬರುತ್ತಾರಾ?ಅಥವಾ ಆರ್ಯವರ್ಧನ್ ಪಾತ್ರ ಇಲ್ಲಿಗೆ ಮುಗಿದು ಬಿಡ್ತಾ ಎಂಬ ಹತ್ತು ಹಲವು ಪ್ರಶ್ನೆಗಳು ವೀಕ್ಷಕರ ಮನಸ್ಸಲ್ಲಿ ಹುಟ್ಟಿಕೊಂಡಿದ್ದು ಕೆಲ ದಿನಗಳಲ್ಲೇ ಇದಕ್ಕೆಲ್ಲಾ ಉತ್ತರ ಸಿಗಲಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now