ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಜಂಕಾರ್ ಮ್ಯೂಸಿಕ್ ನಿಂದ ಬಿಡುಗಡೆಯಾಯ್ತು ವಿನಾಯಕ ಚೌತಿಗೆ ವಿಶೇಷ ಹಾಡು.
ಜೆಮ್ ಶಿವು ಬರೆದಿರುವ “ನೀನೇ ನಮ್ಮ ಜಗವು.. ನೀನೇ ನಮ್ಮ ಬಲವು” ಎಂಬ ಅದ್ಭುತ ಗೀತೆಯನ್ನು ಭರತ್.ಬಿ.ಜೆ ಹಾಗೂ ಇಂಚರ ರಾವ್ ಇಂಪಾಗಿ ಹಾಡುವುದರ ಜೊತೆಗೆ, ಅಭಿನಯವನ್ನೂ ಮಾಡಿದ್ದಾರೆ. ಭರತ್ ಬಿ.ಜೆ ಅವರೆ ಸಂಗೀತ ಸಂಯೋಜಿಸಿದ್ದಾರೆ.
ಈಗಿನ ಯುವಪೀಳಿಗೆ ಭಕ್ತಿಗೀತೆಗಳನ್ನು ಕೇಳುವ ಶೈಲಿ ಕೂಡ ಬದಲಾಗಿದೆ. ಹಾಡನ್ನು ಕೇಳಿದ ತಕ್ಷಣ ಅವರ ಮನಸ್ಸಿಗೆ ಹತ್ತಿರವಾಗುವ ಹಾಗೆ ಇರಬೇಕು. ಅಂತಹ ಗೀತೆಯನ್ನು ಈಗಿನವರು ಬಯಸುತ್ತಾರೆ. ಯುವಜನತೆಯ ಅಭಿರುಚಿಯನ್ನು ಮನಗೊಂಡು ಈ ಬಾರಿ ಗಣೇಶನ ಹಬ್ಬಕ್ಕೆ ಈ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದ್ದೇವೆ ಎನ್ನುತ್ತಾರೆ ಜಂಕಾರ್ ಮ್ಯೂಸಿಕ್ ಸಂಸ್ಥೆಯ ಭರತ್ ಜೈನ್.
