ಶಿವಮೊಗ್ಗ: ಜಿಲ್ಲೆಯಲ್ಲಿ ಸಾವರ್ಕರ್ ಫೋಟೋ ವಿವಾದದಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದೀಗ ಪ್ರೇಮ್‌ಸಿಂಗ್ ಸ್ನೇಹಿತನ ಸ್ಫೋಟಕ ಹೇಳಿಕೆಯಿಂದಾಗಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಘಟನೆಯ ಬಗ್ಗೆ ಮಾತನಾಡಿದ ಪ್ರೇಮ್ ಸಿಂಗ್ ಸ್ನೇಹಿತ ಉತ್ತಮ್ ಭಾಟಿ, ಪ್ರೇಮ್‌ಸಿಂಗ್ ಕೈಗೆ ರಾಕಿ, ಹಣೆಗೆ ತಿಲಕ ಇಟ್ಟುಕೊಂಡಿದ್ದಕ್ಕೆ ಚಾಕು ಇರಿದಿದ್ದಾರೆ ಎಂದಿದ್ದಾರೆ.
ಅಮೀರ್ ಅಹಮ್ಮದ್ ಸರ್ಕಲ್ ನಲ್ಲಿ ನಡೆದ ಗಲಾಟೆ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಪೊಲೀಸರು 144 ಸೆಕ್ಷನ್ ಇದೆ ಎಂದು ಹೇಳಿದಾಗ ನಾವು ಅಂಗಡಿ ಬಂದ್ ಮಾಡಿದೆವು. ಇದೇ ವೇಳೆ ಏಕಾಏಕಿ ಗುಂಪಿನಲ್ಲಿ ಬಂದ ಹತ್ತು ಜನರು ಪ್ರೇಮ್ ಸಿಂಗ್ ಮೇಲೆ ಹಲ್ಲೆ ನಡೆಸಿ, ಚಾಕು ಇರಿದಿದ್ದಾರೆ. ಕೈಗೆ ರಾಕಿ ಕಟ್ಟಿಕೊಂಡಿದ್ದಕ್ಕೆ, ಹಣೆಗೆ ತಿಲಕ ಇಟ್ಟುಕೊಂಡಿದ್ದಕ್ಕೆ ಆತನ ಮೇಲೆ ಹಲ್ಲೆ ನಡೆದಿದೆ ಎಂದಿದ್ದಾರೆ.

ಘಟನೆ ಹಿನ್ನೆಲೆ: ವೀರ ಸಾವರ್ಕರ್ ಭಾವಚಿತ್ರ ಇಡುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಕಿತ್ತಾಟದಿಂದ ಪ್ರೇಮ್ ಸಿಂಗ್ ಗೆ ದುಷ್ಕರ್ಮಿಗಳು ಚಾಕು ಇರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿರುವುದಾಗಿ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.