ಸೋಷಿಯಲ್ ಮೀಡಿಯಾದ ವೈರಲ್ ಹುಡುಗಿ ನಟಿ ಸೋನು ಗೌಡ ಬಿಗ್ ಬಾಸ್ ಓಟಿಟಿ ಮನೆಗೆ ಎಂಟ್ರಿಕೊಟ್ಟ ಬಳಿಕ ಮತ್ತಷ್ಟು ಖ್ಯಾತಿ ಘಳಿಸಿದ್ದಾರೆ. ಫಿನಾಲೆಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಸೋನು ಗೌಡ ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕವು ಸದ್ದು ಮಾಡ್ತಿದ್ದಾರೆ. ಸದ್ಯ ಸೋನು ಗೌಡ ಸಂಬಳದ ಬಗ್ಗೆ ಮಾತನಾಡಿದ್ದಾರೆ.
ಬಿಗ್ ಬಾಸ್ ಎಂಟ್ರಿಕೊಟ್ಟ ದಿನದಿಂದಲು ಸೋನು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೆ ಇದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನೇರಾ ನೇರಾ ಮಾತುಗಳಿಂದ ಸಾಕಷ್ಟು ಮಂದಿಯ ವಿರೋಧ ಕಟ್ಟುಕೊಂಡಿದ್ದ ಸೋನು ಗೌಡ ಖಡಕ್ ಅವತಾರದ ಮೂಲಕವೂ ಸಾಕಷ್ಟು ಸದ್ದು ಮಾಡಿದ್ದರು. ಇದೀಗ ಸೋನು ಗೌಡ ತಾವು ಸೋಷಿಯಲ್ ಮೀಡಿಯಾದಿಂದ ತಿಂಗಳಿಗೆ ಎಷ್ಟು ಸಂಪಾದನೆ ಮಾಡುತ್ತೇನೆ ಅನ್ನೊದನ್ನು ರಿವೀಲ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸೋನು ಶ್ರೀನಿವಾಸ್ ಗೌಡ ಎಂದೇ ಖ್ಯಾತಿ ಘಳಿಸಿರುವ ಸೋನು ಗೌಡ ರೀಲ್ಸ್ ಹಾಗೂ ಹೊಸ ಬ್ರ್ಯಾಂಡ್ ಗಳನ್ನು ಪ್ರಸ್ತುತಪಡಿಸುವ ಮೂಲಕ ನೆಟ್ಟಿಗರಿಗೆ ಪರಿಚಿತರಾಗಿದ್ದಾರೆ. ಸಾಮಾಜಿಕ ಜಾಲಾ ತಾಣದಿಂದ ಸೋನು ಗೌಡ ತಿಂಗಳಿಗೆ ಪಡೆದುಕೊಂಡಿರುವ ಸಂಭಾವನೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ತಿಂಗಳಿಗೆ 3 ಲಕ್ಷ ಸಂಪಾನೆ ಮಾಡುತ್ತೇನೆ ಎಂದಿದ್ದಾರೆ. ಸೋನು ಸಂಭಾವನೆ ಕೇಳಿದ ನೆಟ್ಟಿಗರು ಶಾಕ್ ಆಗಿದ್ದು ತಾವು ಕೂಡ ಸೋನು ರಂತೆ ಸೋಷಿಯಲ್ ಮೀಡಿಯಾದಲ್ಲಿ ಘಳಿಸಬಹುದ ಎಂದು ಆಲೋಚನೆ ಮಾಡುತ್ತಿದ್ದಾರೆ.