• June 20, 2026

35 ವರ್ಷಗಳ ಬಳಿಕ ಕಾಶ್ಮೀರದಲ್ಲಿ ಸಿನಿಮಾ ಥಿಯೇಟರ್ ಓಪನ್: ಮೊದಲ ದಿನವೇ ಅಮಿರ್ ಖಾನ್ ಸಿನಿಮಾ ಪ್ರದರ್ಶನ

ಕಳೆದ 35 ವರ್ಷಗಳಿಂದ ಮನರಂಜನೆಯಿಂದ ದೂರ ಉಳಿದಿದ್ದ ಜಮ್ಮು ಕಾಶ್ಮೀರದಲ್ಲಿ ಹೊಸ ಗಾಳಿ ಬೀಸಿದೆ. ಮನರಂಜನೆಯನ್ನೇ ಮರೆತಿದ್ದ ಜಮ್ಮು ಕಾಶ್ಮೀರದಲ್ಲಿ ಇದೀಗ ಮತ್ತೆ ಮನರಂಜನೆ ಶುರುವಾಗಿದ್ದು ಕಾಶ್ಮೀರದ ಪುಲ್ವಾಮಾ ಹಾಗೂ ಶೋಪಿಯಾನ್ ನಲ್ಲಿ ಎರಡು ಮಲ್ಟಿಫ್ಲೆಕ್ಸ್ ಥಿಯೇಟರ್ ಗಳು ಉದ್ಘಾಟನೆಗೊಂಡಿದೆ. ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಯುವ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾಡಳಿದ ಸಹಯೋಗದೊಂದಿಗೆ ಚಿತ್ರಮಂದಿರಗಳನ್ನು ಸ್ಥಾಪನೆ ಮಾಡುವ ವಿವಿಧೊದ್ದೇಶ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಅದರ ಭಾಗವಾಗಿ ಇದೇ ಸೆಪ್ಟೆಂಬರ್ 20ರಿಂದಲೇ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಸಿನಿ ಪ್ರದರ್ಶನ ಆರಂಭಿಸಲಾಗುತ್ತಿದ್ದು ಮೊದಲ ದಿನವೇ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಪ್ರದರ್ಶನವಾಗಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಮನೋಜ್ ಸಿನ್ಹಾ ಈ ಮಲ್ಲಿಪ್ಲೆಕ್ಸ್ ಥಿಯೇಟರ್‌ನಿಂದ ಕಣಿವೆ ರಾಜ್ಯದ ಜನತೆಗೆ ಎಲ್ಲರಂತೆ ಸಿನಿಮಾ ವೀಕ್ಷಿಸಲು ಸಾಧ್ಯವಾಗಲಿದೆ.  ಬಾಲಿವುಡ್ ಸೇರಿದಂತೆ ಎಲ್ಲಾ ಚಿತ್ರಗಳು ಈ ಮಲ್ಟಿಪ್ಲೇಕ್ಸ್ ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ಆದರೆ ಈ ಮಲ್ಟಿಪ್ಲೆಕ್ಸ್ ಥಿಯೇಟರ್ ಕೇವಲ ಚಿತ್ರಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿಲ್ಲ ಬದಲಾಗಿ ಯುವ ಸಮೂಹಕ್ಕೆ ತರಬೇತಿ ನೀಡುವ ಕೇಂದ್ರಗಳಾಗಿವೆ. ಇಲ್ಲಿ ಸಿನಿಮಾ ಪ್ರೊಡಕ್ಷನ್, ನಿರ್ಮಾಣ, ಕಿರು ಚಿತ್ರ ನಿರ್ಮಾಣ, ನಿರ್ದೇಶನ ಕುರಿತು ತರಬೇತಿಗಳನ್ನು ನೀಡಲಾಗುತ್ತದೆ ಎಂದು ಮನೋಜ್ ಸಿನ್ಹ ಟ್ವೀಟ್ ಮೂಲಕ ತಿಳಿಸಿದ್ದಾರೆ. ಸದ್ಯ ದಕ್ಷಿಣ ಕಾಶ್ಮೀರದ ಅವಳಿ ಜಿಲ್ಲೆಗಳಾದ ಪುಲ್ವಾಮಾ ಮತ್ತು ಶೋಪಿಯಾನ್‌ನಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ಉದ್ಘಾಟಿಸಿದರು. ಮುಂದಿನ ದಿನಗಳಲ್ಲಿ ಅನಂತನಾಗ್, ಶ್ರೀನಗರ, ಬಂಡಿಪೋರಾ, ಗಂದರ್‌ಬಾಲ್, ದೋಡಾ, ರಾಜೌರಿ, ಪೂಂಚ್, ಕಿಶ್ತ್ವಾರ್ ಮತ್ತು ರಿಯಾಸಿ ಜಿಲ್ಲೆಗಳಲ್ಲೂ ಚಿತ್ರಮಂದಿರಗಳು ಉದ್ಘಾಟನೆಗೊಳ್ಳಲಿವೆ ಎಂದು ತಿಳಿಸಿದ್ದಾರೆ.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now