• January 2, 2026

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನೆಲೆ: ದೇಶಕ್ಕೆ ಬರುತ್ತಿವೆ 8 ಚಿರತೆಗಳು

ಇಂದು ಪ್ರಧಾನಿ ನರೇಂದ್ರ ಮೋದಿಗೆ 72ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಿಂದ ಅಳಿವಿನಂಚಿನಲ್ಲಿರುವ ಚಿರತೆಗಳು ಭಾರತಕ್ಕೆ ಬರಲಿವೆ. ನಮೀಬಿಯಾದ ಐದು ಹೆಣ್ಣು ಹಾಗೂ ಮೂರು ಗಂಡು ಚಿರತೆಗಳನ್ನು ಹೊತ್ತು ವಿಂಡ್ ಹೋಕ್ ನ ಹೋಸಿಯಾ ಕುಟಾಕೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಹೊರಡಲಿದೆ. ವಿಶೇಷ B747 ವಿಮಾನವು 8 ಚಿರತೆಗಳನ್ನು ಹೊತ್ತು ಹೊರಡಲಿದ್ದು ನಮೀಬಿಯಾದಿಂದ ನೇರವಾಗಿ ಭಾರತಕ್ಕೆ ಬಂದಿಳಿಯಲಿದೆ.  ಈ ಬೃಹತ್ ವಿಮಾನವು 16 ಗಂಟೆಗಳ ಕಾಲ ಹಾರುವ ಸಾಮರ್ಥ್ಯ ಹೊಂದಿದ್ದು ಎಲ್ಲಿಯೂ ನಿಲ್ಲದೆ ನೇರವಾಗಿ ಭಾರತಕ್ಕೆ ಬರಲಿದೆ. ಇಂದೇ ಪ್ರಧಾನಿ ನರೇಂದ್ರ ಮೋದಿ ಚಿರತೆಗಳನ್ನು ಭಾರತದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಿದ್ದಾರೆ. ಈಗಾಗ್ಲೆ ರಾಷ್ಟ್ರೀಯ ಉದ್ಯಾನವನದ ಸಿಬ್ಬಂದಿಗೆ ಚಿರತೆಗಳನ್ನು ನೋಡಿಕೊಳ್ಳಲು ಬೇಕಾದ  ಅಗತ್ಯ ತರಬೇತಿಗಳನ್ನು ನೀಡಲಾಗಿದೆ. ಮಚ್ಚೆ ಗುರುತಿನ ಚೀತಾಗಳ ಸಂತತಿ ಭಾರತದಲ್ಲಿ 70 ವರ್ಷ ಹಿಂದೆಯೇ ನಾಶವಾಗಿತ್ತು. ಭಾರತದಲ್ಲಿದ್ದ ಕೊನೆಯ ಚೀತಾ 1947ರಲ್ಲಿ ಸಾವನ್ನಪ್ಪಿತ್ತು. 1952ರಲ್ಲಿ ಈ ಪ್ರಭೇದ ಭಾರತದಲ್ಲಿ ಇಲ್ಲ ಎಂದು ಘೋಷಣೆ ಮಾಡಲಾಗಿತ್ತು. ಇದೀಗ 75 ವರ್ಷಗಳ ಬಳಿಕ ಅಳಿವಿನಂಚಿನಲ್ಲಿದ್ದ ಚೀತಾಗಳು ಭಾರತಕ್ಕೆ ಬಂದಿಳಿದಿವೆ. ಚಿತಾಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ 24 ಗ್ರಾಮಗಳ ಜನರನ್ನು ಸ್ಥಳಾಂತರಿಸಲಾಗಿದೆ. 8 ಚೀತಾಗಳ ಸ್ಥಳಾಂತರಕ್ಕೆ  75 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now