• March 15, 2026

ಬಿಗ್ ಬಾಸ್ ಓಟಿಟಿ ಟಾಪರ್ ಆದ ರೂಪೇಶ್ ಶೆಟ್ಟಿ ಪಡೆದುಕೊಂಡಿದ್ದು ಎಷ್ಟು ಲಕ್ಷ ಬಹುಮಾನ ಗೊತ್ತಾ?

ಇದೇ ಮೊದಲ ಭಾರಿಗೆ ಕನ್ನಡದ ಓಟಿಟಿ ಫ್ಲ್ಯಾಟ್ ಫಾರ್ಮ್ ನಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಶೋಗೆ ತೆರೆ ಬಿದ್ದಿದೆ. ಶುಕ್ರವಾರ ಸಂಜೆ ಕಾರ್ಯಕ್ರಮದ ಫಿನಾಲೆ ನಡೆದಿದ್ದು ತುಳು ಪ್ರತಿಭೆ ನಟ ರೂಪೇಶ್ ಶೆಟ್ಟಿ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. 42 ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ರೂಪೇಶ್ ಟಾಪರ್ ಆಗುವ ಮೂಲಕ ಬಿಗ್ ಬಾಸ್ ಸೀಸನ್ 9ಕ್ಕೆ ಪ್ರವೇಶಿಸಿದ್ದಾರೆ.ಇವರ ಜೊತೆ ನಟಿ ಸಾನ್ಯಾ ಐಯ್ಯರ್, ನಟ ರಾಕೇಶ್ ಅಡಿಗ ಹಾಗೂ ಆರ್ಯವರ್ಧನ್ ಗುರೂಜಿ ಕೂಡ ಬಿಗ್ ಬಾಸ್ ಟಿವಿ ಶೋಗೆ ಎಂಟ್ರಿಕೊಟ್ಟಿದ್ದಾರೆ. ಇಳಿದ ಕಂಟೆಸ್ಟೆಂಟ್ ಗಳಾದ ಸೋಮಣ್ಣ ಮಾಚಿಮಾಡ, ಜಯಶ್ರೀ ಆರಾಧ್ಯ, ಸೋನು ಗೌಡ ಹಾಗೂ ಜಶ್ವಂತ್ ಕಾರ್ಯಕ್ರಮದಿಂದ ಹೊರ ನಡೆದಿದ್ದಾರೆ. 42 ದಿನಗಳ ಕಾಲ ನಡೆದ ರಿಯಾಲಿಟಿ ಶೋನಲ್ಲಿ ಬೆಸ್ಟ್ ಫರ್ಪಾಮೆನ್ಸ್ ತೋರಿದ ನಟ ರೂಪೇಶ್ ಶೆಟ್ಟಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡಲಾಯಿತು. ಇನ್ನೊಂದು ವಾರದಲ್ಲಿ ಅಂದರೆ ಇದೇ ಸೆಪ್ಟೆಂಬರ್ 24ರಿಂದ ಬಿಗ್ ಬಾಸ್ ಟಿವಿ ಶೋ ಆರಂಭವಾಗಲಿದೆ. ಕಿಚ್ಚ ಸುದೀಪ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಓಟಿಟಿಯ ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ, ಸಾನ್ಯಾ ಐಯ್ಯರ್ ಹಾಗೂ ಆರ್ಯವರ್ಧನ್ ಗುರೂಜಿ ಜೊತೆ ಹಳೇ ಸೀಸನ್ ನ ಐವರು ಸ್ಪರ್ಧಿಗಳು ಸೀಸನ್ 9ಕ್ಕೆ ಎಂಟ್ರಿಕೊಡಲಿದ್ದಾರೆ. ಒಟ್ನಲ್ಲಿ ಈಗಾಗ್ಲೆ ಪ್ರೇಕ್ಷಕರ ಮನಗೆದ್ದ ಕಂಟೆಸ್ಟೆಂಟ್ ಗಳು ಮತ್ತೆ ಬಿಗ್ ಬಾಸ್ ಟಿವಿ ಶೋನಲ್ಲಿ ಕಾಣಿಸಿಕೊಳ್ತಿರೋದು ಸಾಕಷ್ಟು ಕುತೂಹಲ ಕ್ರಿಯೇಟ್ ಮಾಡಿದೆ. ಬಿಗ್ ಬಾಸ್ ಟಿವಿ ಶೋನಲ್ಲಿ ಸ್ಪರ್ಧಿಗಳು ಯಾವ ರೀತಿ ಪಾರ್ಟಿಸಿಪೇಟ್ ಮಾಡ್ತಾರೆ?ಕೊನೆಯಲ್ಲಿ ಯಾರು ಬಿಗ್ ಬಾಸ್ ಟ್ರೋಪಿ ಹಿಡಿದು ಗೆಲುವಿನ ನಗೆ ಬೀರುತ್ತಾರೆ ಅನ್ನೋ ಕ್ಯೂರಿಯಾಸಿಟಿ ಈಗಾಗ್ಲೆ ಕ್ರಿಯೇಟ್ ಆಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now