• January 1, 2026

ನಿರ್ಮಾಪಕರಿಗೆ ತಲೆ ನೋವು ತರಿಸಿದ ರಶ್ಮಿಕಾ ಮಂದಣ್ಣ ಸಂಭಾವನೆ: ಸಿನಿಮಾವೊಂದಕ್ಕೆ ಕಿರಿಕ್ ಪಾರ್ಟಿ ಬ್ಯೂಟಿ ಪಡೆದುಕೊಳ್ಳೋದೆಷ್ಟು ಗೊತ್ತಾ?

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್ ನಲ್ಲೂ ಸಾಕಷ್ಟು ಬೇಡಿಕೆ ಹೆಚ್ಚಿಸಿಕೊಂಡಿರುವ ರಶ್ಮಿಕಾ ಇದೀಗ ನಿರ್ಮಾಪಕರಿಗೆ ತಲೆ ನೋವು ಹೆಚ್ಚಿಸಿದ್ದಾರೆ. ಸಿನಿ ರಂಗದಲ್ಲಿ ನಟಿ ರಶ್ಮಿಕಾ ಮಂದಣ್ಣ ಓಡುವ ಕುದುರೆಯಾಗಿದ್ದಾರೆ. ರಶ್ಮಿಕಾ ನಟನೆಯ ಸಾಕಷ್ಟು ಸಿನಿಮಾಗಳು ಹಿಟ್ ಆಗುತ್ತಿವೆ. ಅಲ್ಲದೆ ಒಂದರ ಹಿಂದೊಂದರಂತೆ ಸ್ಟಾರ್ ನಟರ ಸಿನಿಮಾಗಳಲ್ಲಿ ರಶ್ಮಿಕಾ ಬಣ್ಣ ಹಚ್ಚುತ್ತಿದ್ದಾರೆ. ಬೇಡಿಕೆ ಹೆಚ್ಚುತ್ತಿದ್ದಂತೆ ರಶ್ಮಿಕಾ ಸಂಭಾವನೆಯೂ ಹೆಚ್ಚುತ್ತಿದೆಯಂತೆ. ಟಾಲಿವುಡ್ ನಟ ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ನಟಿಸಿದ ಶ್ರೀವಲ್ಲಿಯಾಗಿ ಕಾಣಿಸಿಕೊಂಡ ಬಳಿಕ ರಶ್ಮಿಕಾಗೆ ಮತ್ತಷ್ಟು ಬೇಡಿಕೆ ಕ್ರಿಯೇಟ್ ಆಗಿದೆ. ಪುಷ್ಪ ಸಿನಿಮಾ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಇದೀಗ ಪುಷ್ಪ 2 ಚಿತ್ರದಲ್ಲೂ ರಶ್ಮಿಕಾ ಕಾಣಿಸಿಕೊಳ್ತಿದ್ದಾರೆ. ಪುಷ್ಪ ಚಿತ್ರದ ಮೊದಲ ಭಾಗಕ್ಕೆ 1 ಕೋಟಿ ಸಂಭಾವನೆ ಪಡೆದುಕೊಂಡಿದ್ದ ರಶ್ಮಿಕಾ ಪುಷ್ಪ 2 ಚಿತ್ರಕ್ಕಾಗಿ 4 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ತಮ್ಮ ಮುಂದಿನ ಸಿನಿಮಾಗೆ ರಶ್ಮಿಕಾ 5 ಕೋಟಿ ಸಂಭಾವನೆ ಪಡೆದುಕೊಳ್ತಿದ್ದಾರಂತೆ. ಚಿತ್ರದಿಂದ ಚಿತ್ರಕ್ಕೆ ರಶ್ಮಿಕಾ ಸಂಭಾವನೆ ಕೋಟಿಗಳ ಲೆಕ್ಕದಲ್ಲಿ ಹೆಚ್ಚುತ್ತಿರೋದು ನಿರ್ಮಾಪಕರಿಗೆ ತಲೆ ನೋವಾಗಿದೆ. ಸದ್ಯ ರಶ್ಮಿಕಾ ಮಂದಣ್ಣ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಬಾಲಿವುಡ್ ನಲ್ಲಿ ರಶ್ಮಿಕಾ ನಟನೆಯ ಸಿನಿಮಾಗಳು ತೆರೆಗೆ ಬರುವ ಮೊದಲೇ ಮತ್ತಷ್ಟು ಆಫರ್ ಗಳು ರಶ್ಮಿಕಾರನ್ನು ಹುಡುಕಿಕೊಂಡು ಬರುತ್ತಿವೆ. ಹಿಂದಿ ಚಿತ್ರರಂಗದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಿದ್ದ ಆಶಿಕಿ ಚಿತ್ರದ ಸಿಕ್ವೇಲ್ ಆಶಿಕಿ 3 ಚಿತ್ರಕ್ಕೆ ರಶ್ಮಿಕಾ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ಸಾಕಷ್ಟು ಜಾಹಿರಾತುಗಳಲ್ಲಿ ಕೊಡಗಿನ ಕುವರಿ ಕಾಣಿಸಿಕೊಳ್ತಿದ್ದು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಡಿಮ್ಯಾಂಡ್ ಕ್ರಿಯೇಟ್ ಮಾಡುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now