ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬ್ರಹ್ಮಾಸ್ತ್ರ 2 ನಲ್ಲಿರಲಿದೆ ಬಾಲಿವುಡ್ ನ ರಿಯಲ್ ಜೋಡಿ: ಸೀಕ್ರೆಟ್ ಬಿಟ್ಟು ಕೊಟ್ಟ ಅನುಪಮಾ ಚೋಪ್ರಾ
ಬ್ರಹ್ಮಾಸ್ತ್ರ ಸಿನಿಮಾದ ಮೊದಲ ಭಾಗ ಶಿವ ಚಿತ್ರದಲ್ಲಿ ರಿಯಲ್ ಲೈಫ್ ನಲ್ಲಿ ಜೋಡಿಯಾಗಿರೋ ಆಲಿಯಾ ಭಟ್ ಹಾಗೂ ರಣಬೀರ್ ಕಫೂರ್ ಕಾಣಿಸಿಕೊಂಡು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇದೀಗ ಎರಡನೇ ಭಾಗದಲ್ಲಿ ರಿಯಲ್ ಲೈಫ್ ಜೋಡಿಗಳನ್ನು ರೀಲ್ ನಲ್ಲಿ ಒಂದು ಮಾಡಲು ನಿರ್ದೇಶಕರು ಮುಂದಾಗಿದ್ದಾರೆ.
ಬ್ರಹ್ಮಾಸ್ತ್ರ ಸಿನಿಮಾದ ಮೊದಲ ಭಾಗದಲ್ಲಿ ಆಲಿಯಾ ಭಟ್ ಹಾಗೂ ರಣವೀರ್ ಕಪೂರ್ ಕಾಣಿಸಿಕೊಂಡಿದ್ದು ಸಿನಿಮಾ ಸೂಪರ್ ಹಿಟ್ ಆಗಿದೆ. ಇದೀಗ ಎರಡನೇ ಭಾಗದಲ್ಲಿ ಬಾಲಿವುಡ್ ಸ್ಟಾರ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ರನ್ನು ತೆರೆ ಮೇಲೆ ತೋರಿಸೋಕೆ ನಿರ್ದೇಶಕರು ರೆಡಿಯಾಗಿದ್ದಾರಂತೆ.ಇಂಥದೊಂದು ಬಿಗ್ ಸೀಕ್ರೇಟ್ ನ ಅನುಮಪಾ ಚೋಪ್ರಾ ಬಿಚ್ಚಿಟ್ಟಿದ್ದಾರೆ.
ಮೊದಲ ಭಾಗ ಸೂಪರ್ ಹಿಟ್ ಆಗ್ತಿದ್ದಂತೆ ನಿರ್ದೇಶಕ ಅಯಾನ್ ಮುಖರ್ಜಿ ಎರಡನೇ ಭಾಗದ ಚಿತ್ರೀಕರಣಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಅಯಾನ್ ಮುಖರ್ಜಿ ಸದ್ಯದಲ್ಲೇ ಎರಡನೇ ಭಾಗದ ಶೂಟಿಂಗ್ ಶುರು ಮಾಡೋದಾಗಿ ಹೇಳಿಕೊಂಡಿದ್ದಾರೆ.
ಬಾಯ್ಕಾಟ್ ಬಿಸಿಯ ನಡುವೆಯೇ ತೆರೆಗೆ ಬಂದ ಬ್ರಹ್ಮಾಸ್ತ್ರ ಸಿನಿಮಾವನ್ನು ಪ್ರೇಕ್ಷಕರು ಕೈ ಹಿಡಿದಿದ್ದಾರೆ. ಬಿಡುಗಡೆ ಆದ ಮೊದಲ ದಿನವೇ 36 ಕೋಟಿ ಕಲೆಕ್ಷನ್ ಮಾಡಿದ್ದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 165 ಕೋಟಿ ಘಳಿಸಿದೆ. ವಾರಾಂತ್ಯದಲ್ಲಿ 200 ಕೋಟಿ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ.
