ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಓಟಿಟಿಯಿಂದ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದ ಸ್ಪರ್ಧಿಗಳಿವರು
ಶುಕ್ರವಾರ(ಸೆ.16)ಸಂಜೆ ಬಿಗ್ ಬಾಸ್ ಓಟಿಟಿ ಫಿನಾಲೆಗೆ ತೆರೆ ಬಿದ್ದಿದೆ. ತುಳು ನಾಡ ಪ್ರತಿಭೆ ನಟ ರೂಪೇಶ್ ಶೆಟ್ಟಿ ಬಿಗ್ ಬಾಸ್ ಓಟಿಟಿಯ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಈ ಮೂಲಕ ಟಿವಿ ಬಿಗ್ ಬಾಸ್ ಸೀಸನ್ 9ಗೆ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಸಾನ್ಯಾ ಐಯರ್, ರಾಕೇಶ್ ಅಡಿಗ ಹಾಗೂ ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಸೀಸನ್ 9ರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಸೀಸನ್ 9ಕ್ಕೆ ಹೋಗಲು ಆಯ್ಕೆ ಯಾಗಿದ್ದಾರೆ ಎಂದು ಸುದೀಪ್ ಹೇಳುತ್ತಲೇ ಗುರೂಜಿ ಸಖತ್ ಎಮೋಷನಲ್ ಆದರು. ಈ ವೇಳೆ ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಜೊತೆ ಗುರೂಜಿ ಮಗಳು ನಿಂತುಕೊಂಡಿದ್ದರು. ಇದನ್ನು ನೋಡಿದ ಗುರೂಜಿ, ‘ನನ್ನ ಮಾತುಗಳನ್ನು ಅರ್ಥ ಮಾಡಿಕೊಂಡ ಸುದೀಪ್ ಸರ್ಗೆ ನಾನು ಧನ್ಯವಾದ ಹೇಳುತ್ತೇನೆ. ವೋಟ್ ಹಾಕಿದವರಿಗೆ ಜೀವನ ಪೂರ್ತಿ ಚಿರಋಣಿ ಆಗಿರುತ್ತೇನೆ’ ಎಂದು ಎಮೋಷನಲ್ ಆದರು.
