• March 16, 2026

ಇಂದು ಕಬ್ಜ ಟೀಸರ್ ರಿಲೀಸ್: ವಿಶೇಷ ಅತಿಥಿಯಾಗಿ ಆಗಮಿಸಲಿರೋ ರಾಣಾ ದಗ್ಗುಬಾಟಿ

ಸ್ಯಾಂಡಲ್ ವುಡ್ ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟಿಗೆ ನಿರೀಕ್ಷೆ ಮೂಡಿಸಿರುವ ಸಿನಿಮಾ ಕಬ್ಜ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ನಲ್ಲಿ ಮೂಡಿಬರ್ತಿರುವ ಕಬ್ಜ ಸಿನಿಮಾ ಟ್ರೈಲರ್ ಇಂದು ಸಂಜೆ 4.30ಕ್ಕೆ ರಿಲೀಸ್ ಆಗುತ್ತಿದ್ದು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ತೆಲುಗು ನಟ ರಾಣಾ ದಗ್ಗುಬಾಟಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇಂದು ಸಂಜೆ ಬೆಂಗಳೂರಿನ ಮಾಲ್ ಒಂದರಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ರಾಣಾ ಆಗಮಿಸುತ್ತಿದ್ದು ರಾಣಾ ಜೊತೆ ನಟಿ ಶ್ರೀಯಾ ಶರಣ್ ಕೂಡ ಭಾಗಿಯಾಗುತ್ತಿದ್ದಾರೆ. ಇಂದು ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ನಿರ್ದೇಶಕ ಆರ್ ಚಂದ್ರು ಕಬ್ಜ ಸಿನಿಮಾದ ಟೀಸರನ್ನು ಉಪ್ಪಿ ಬರ್ತಡೇಗೆ ಗಿಫ್ಟ್ ಆಗಿ ನೀಡುತ್ತಿದ್ದಾರೆ. ಒಟ್ಟು ಐದು ಭಾಷೆಯಲ್ಲಿ ಏಕ ಕಾಲದಲ್ಲಿ ಕಬ್ಜ ಟೀಸರ್ ಬಿಡುಗಡೆ ಆಗಲಿದೆ. ಈಗಾಗ್ಲೆ ಸ್ವತಃ ನಟ ಕಿಚ್ಚ ಸುದೀಪ್ ಟೀಸರ್ ಕಾದು ಕಾಯ್ತಿರೋದಾಗಿ ತಿಳಿಸಿದ್ದು ಪ್ರತಿಯೊಬ್ಬರು ಟೀಸರ್ ನೋಡಿ ಎಂದು ವಿಡಿಯೋ ಸಂದೇಶದಲ್ಲಿ ಹೇಳಿಕೊಂಡಿದ್ದರು. ಈಗಾಗ್ಲೆ ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡ್ತಿದೆ.ಕೆಜಿಎಫ್ 2 ಬಳಿಕ ಪರಭಾಷೆಯಲ್ಲೂ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ ಅಂದರೆ ಅದು ಕಬ್ಜ. ಇದೇ ಮೊದಲ ಭಾರಿಗೆ ಉಪೇಂದ್ರ, ಸುದೀಪ್ ಹಾಗೂ ಆರ್ ಚಂದ್ರು ಒಟ್ಟಿಗೆ ಕೆಲಸ ಮಾಡ್ತಿರೋದ್ರಿಂದ ಸಿನಿಮಾದ ಮೇಲೆ ಮತ್ತಷ್ಟು ನಿರೀಕ್ಷೆ ಇದೆ. ಕೆಜಿಎಫ್ ಸಿನಿಮಾದಲ್ಲಿ ಕೆಲಸ ಮಾಡಿದ್ದ ತಾಂತ್ರಿಕ ತಂಡ ಕೂಡ ಕಬ್ಜ ಸಿನಿಮಾದಲ್ಲಿ ಕೆಲಸ ಮಾಡಿದೆ. ಒಟ್ನಲ್ಲಿ ಕಬ್ಜ ಸಿನಿಮಾಗಾಗಿ ಪ್ರತಿಯೊಬ್ಬರು ಕಾದು ಕೂತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now