• January 1, 2026

‘ಸೂರ್ಯ’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ ಡಾಲಿ ಧನಂಜಯ್

ಹಿರಿಯ ನಿರ್ದೇಶಕ, ಕಲಾವಿದ ಬಿ. ಸುರೇಶ್‌ ಅವರ ಜೊತೆ ಸಾಕಷ್ಟು ವರ್ಷ ನಿರ್ದೇಶನ ವಿಭಾಗದಲ್ಲಿ  ಕೆಲಸಮಾಡಿ ಅನುಭವ ಪಡೆದಿರುವ ಸಾಗರ್‌ ಈಗ  ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಅವರ ಚೊಚ್ಚಲ ನಿರ್ದೇಶನದ  ಚಿತ್ರದ ಹೆಸರು  ಸೂರ್ಯ. `ಪವರ್‌ ಆಫ್‌ ಲವ್‌’ ಎಂಬ ಟ್ಯಾಗ್‌ಲೈನ್‌ ಇದಕ್ಕಿದೆ. ಯುವ ಪ್ರತಿಭೆ ಪ್ರಶಾಂತ್ ಈ ಚಿತ್ರದ ನಾಯಕ ನಟ. ಹೆಸರಿನಷ್ಟೇ ಪವರ್‌ಫುಲ್‌ ಕಥೆಯನ್ನು ಸಿದ್ಧಪಡಿಸಿಕೊಂಡು ಆ್ಯಕ್ಷನ್‌ ಕಟ್‌ ಹೇಳಲು ಸಜ್ಜಾಗಿದ್ದಾರೆ ಡೈರೆಕ್ಟರ್‌ ಸಾಗರ್‌. ಇತ್ತೀಚೆಗಷ್ಟೇ ಈ ಚಿತ್ರದ ಫಸ್ಟ್‌ ‌ಲುಕ್‌ ಅನಾವರಣಗೊಂಡಿದ್ದು, ಡಾಲಿ ಧನಂಜಯ್‌ ಪೋಸ್ಟರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಸಾಥ್‌ ನೀಡಿದ್ದಾರೆ. ಚಿತ್ರದ ಪೋಸ್ಟರ್‌ ಹಾಗೂ ಯುವ ಪ್ರತಿಭೆಗಳ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುವುದರ ಜತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಲವ್‌, ಆ್ಯಕ್ಷನ್‌, ಕಾಮಿಡಿ, ಸೆಂಟಿಮೆಂಟ್‌ ಎಲ್ಲವೂ ಬೆರೆತಿರುವ ಪಕ್ಕಾ ಕಮರ್ಷಿಯಲ್‌  ಸಿನಿಮಾ ಇದಾಗಿದೆ. ಸಿನಿಮಾಕ್ಕೆ ಬೇಕಾದ ಸಕಲ ತಯಾರಿಯನ್ನು ನಡೆಸಿ ಕ್ಯಾಮೆರಾ ಎದುರಿಸಲು ಸಜ್ಜಾಗಿದ್ದಾರೆ ನಾಯಕ ನಟ ಪ್ರಶಾಂತ್‌. ಸೆಪ್ಟೆಂಬರ್‌ ಕೊನೆ ವಾರ ಈ ಚಿತ್ರದ ಮುಹೂರ್ತ ನೆರವೇರಲಿದ್ದು, ಅಕ್ಟೋಬರ್‌ ಮೊದಲ ವಾರದಿಂದ ಶೂಟಿಂಗ್‌ ಪ್ರಾರಂಭಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಹಿರಿಯ ನಟಿ ಶೃತಿ, `ಆರ್ಮುಗಂ’ ರವಿಶಂಕರ್‌, ಪ್ರಮೋದ್‌ ಶೆಟ್ಟಿ  ಕಥೆ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನೂ ಸಾಕಷ್ಟು ಕಲಾವಿದರ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ ಚಿತ್ರತಂಡ. ನಂದಿ ಸಿನಿಮಾಸ್‌ ಬ್ಯಾನರ್‌ ಅಡಿಯಲ್ಲಿ ಬಸವರಾಜ್‌ ಬೆಣ್ಣಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ರವಿ ಬೆಣ್ಣಿ ಹಾಗೂ ಸಂತೋಷ್‌ ಕುರ್ಬೇಟ್‌ ಸಹ ನಿರ್ಮಾಪಕರು. ಕೆಜಿಎಫ್‌  ಭುವನ್‌ ಗೌಡ ಜೊತೆ ಕೆಲಸ ಮಾಡಿದ ಮನುರಾಜ್‌ ಈ ಚಿತ್ರದ ಛಾಯಾಗ್ರಾಹಕ. ಯುವನ್‌ ಶಂಕರ್‌ ರಾಜಾ ಜೊತೆ ಅನುಭವ ಹೊಂದಿರುವ ಶ್ರೀಶಾಸ್ತ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಮಣಿಕಂಠ.ಕೆ.ವಿ ಸಂಭಾಷಣೆ ಬರೆಯುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now