• June 13, 2026

ರಿಷಬ್ ಪಂತ್ ಗೆ ನಾನು ಕ್ಷಮೆ ಕೇಳಿಲ್ಲ: ಮತ್ತೆ ಉಲ್ಟ್ ಹೊಡೆದ ನಟಿ ಊರ್ವಶಿ ರೌಟೇಲಾ

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹಾಗೂ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ ನಡುವಿನ ಸೋಷಿಯಲ್ ಮೀಡಿಯಾ ವಾರ್ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ರಿಷಬ್ ಪಂತ್ ನನ್ನನ್ನು ಭೇಟಿ ಮಾಡಲು 10 ಗಂಟೆ ಕಾದಿದ್ದರು’ ಎಂದು ಹೇಳುವ ಮೂಲಕ ಊರ್ವಶಿ ರೌಟೇಲಾ ಸುದ್ದಿ ಮಾಡಿದ್ದರು. ಇದಕ್ಕೆ ರಿಷಬ್ ಪಂತ್ ತಿರುಗೇಟು ನೀಡಿದ್ದು ಆ ಬಳಿಕ ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ಕೋಳಿ ಜಗಳ ಶುರುಮಾಡಿಕೊಂಡಿದ್ದಾರೆ. ಬಳಿಕ ಊರ್ವಶಿ ಕ್ಷಮೆ ಕೇಳಿದ್ದು ಇದೀಗ ತಾನು ಕ್ಷಮೆ ಕೇಳಿಯೇ ಇಲ್ಲ  ಎಂದು ಉಲ್ಟ್ ಹೊಡೆದಿದ್ದಾರೆ. ಸಂದರ್ಶನವೊಂದರಲ್ಲಿ ಭಾಗಿಯಾದ ಊರ್ವಶಿ ಅವರಿಗೆ ಸಂದರ್ಶಕರು ‘ರಿಷಭ್ ಪಂತ್​ಗೆ ಏನಾದರೂ ಸಂದೇಶ ನೀಡುವುದು ಇದೆಯೇ’ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಊರ್ವಶಿ ನಾನು ‘ನೇರವಾಗಿ ವಿಚಾರಕ್ಕೆ ಬರುತ್ತೇನೆ. ಯಾವುದೇ ನಾನ್ಸೆಸ್ ಮಾತನಾಡುವುದಿಲ್ಲ’ ಎಂದಿದ್ದರು. ರಿಷಭ್​ಗೆ ಏನಾದರೂ ಸಂದೇಶವಿದ್ದರೆ ತಿಳಿಸಿ ಎಂದು ಸಂದರ್ಶಕರು ಹೇಳಿದ್ದಾರೆ. ಈ ವೇಳೆ ಊರ್ವಶಿ ‘ಮತ್ತೇನು ಇಲ್ಲ. ಸಾರಿ’ ಎಂದಿದ್ದರು. ಊರ್ವಶಿ ಸಾರಿ ಕೇಳಿದ್ದು ನೋಡಿ ಇವರಿಬ್ಬರ ಕೋಳಿ ಜಗಳ ಕೊನೆಗೂ ಅಂತ್ಯವಾಯಿತು ಎನ್ನಲಾಗಿತ್ತು. ಜೊತೆಗೆ ಈ ಬಗ್ಗೆ ಸಾಕಷ್ಟು ಟ್ರೋಲ್ ಗಳು ಹರಿದಾಡಿದ್ದವು. ಆದರೆ ಇದೀಗ ಊರ್ವಶಿ ನಾನು ಸಾರಿ ಕೇಳಿರುವುದು ರಿಷಬ್ ಪಂತ್ ಬಳಿಯಲ್ಲ ಎಂದಿದ್ದಾರೆ. ಯಾವುದೇ ಕಾರಣಕ್ಕೂ ನಾನು ಕ್ಷಮೆ ಕೇಳಿಲ್ಲ. ಕೇಳಿರುವ ಕ್ಷಮೆ ರಿಷಭ್ ಪಂತ್ ಗೆ ಅಲ್ಲ. ನನ್ನ ಫ್ಯಾನ್ಸ್ ಗೆ ಮತ್ತು ನನ್ನ ಆಪ್ತರಿಗೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಊರ್ವಶಿ ಹೊಸ ಹೇಳಿಕೆ ಮತ್ತೆ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now