ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಭೋಗಸ್, ಇದು ಮೂವಿ ಮಾಫಿಯಾ: ನಟಿ ಕಂಗನಾ ರಾಣವತ್
ಕಳೆದ ಕೆಲ ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಕುರಿತಾಗಿ ಟೀಕೆಗಳನ್ನು ವ್ಯಕ್ತಪಡಿಸಿದ್ದರು. ಅವುಗಳನ್ನು ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದಾದ ಕೆಲವೇ ದಿನಗಳಲ್ಲಿ ಮತ್ತೆ ಬ್ರಹ್ಮಾಸ್ತ್ರದ ಕಲೆಕ್ಷನ್ ಅನ್ನೂ ಮೂವಿ ಮಾಫಿಯಾ ಎಂದಿದ್ದಾರೆ.
ಕಂಗನಾ ಮಾತನ್ನು ಸಾಕಷ್ಟು ಮಂದಿ ನಂಬಿದ್ದಾರೆ. ಯಾಕೆಂದರೆ ಬ್ರಹ್ಮಾಸ್ತ್ರ ಸಿನಿಮಾದ ವಿಮರ್ಶೆ ಅಷ್ಟೇ ಕಷ್ಟೇ ಅನ್ನೋ ಮಟ್ಟಿಗಿದೆ. ಜೊತೆಗೆ ಸಿನಿ ರಸಿಕರು ಕೂಡ ಬ್ರಹ್ಮಾಸ್ತ್ರ ಸಿನಿಮಾ ಫ್ಲಾಪ್ ಎನ್ನುತ್ತಿದ್ದಾರೆ. ಹೀಗಾಗಿ ಕಂಗನಾ ಹೇಳಿಕೆಯಿಂದ ಮುಂದಿನ ದಿನಗಳಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಮೇಲೆ ಹೊಡೆತ ಬೀಳುವ ಸಾಧ್ಯತೆಯೂ ಇದೆ ಎನ್ನಲಾಗ್ತಿದೆ.
ಆಂಧ್ರ ಬಾಕ್ಸ್ ಆಫೀಸ್ ಕಲೆಕ್ಷನ್ ಡಾಟ್ ಕಾಮ್ ಪ್ರಕಟ ಮಾಡಿರುವ ಮಾಹಿತಿ ಪ್ರಕಾರ ‘ಬ್ರಹ್ಮಾಸ್ತ್ರ ಸಿನಿಮಾಗೆ ಒಟ್ಟು 650 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ಇದುವರೆಗೂ ಸಿನಿಮಾ ಘಳಿಸಿರುವುದು ಕೇವಲ 144 ಕೋಟಿ ರೂಪಾಯಿ ಕಲೆಕ್ಷನ್ ಮಾತ್ರವೇ. ಇದಕ್ಕೆ ಕಂಗನಾ ರಿಯಾಕ್ಟ್ ಮಾಡಿದ್ದಾರೆ.
‘ಬಾಲಿವುಡ್ ಚಿತ್ರರಂಗ ಕಂಡಿರುವ ಬಿಗ್ ಹಿಟ್ ಸಿನಿಮಾ ಬ್ರಹ್ಮಾಸ್ತ್ರ ಎನ್ನಲಾಗುತ್ತಿದೆ. ಅದು 650 ಕೋಟಿಯಲ್ಲಿ ಮಾಡಿರುವುದು 144 ಕೋಟಿ ಕಲೆಕ್ಷನ್. ಇಷ್ಟು ಕಲೆಕ್ಷನ್ ಮಾಡಿರುವುದು ಸುಳ್ಳು ಎನ್ನಲಾಗಿದೆ. ಇದು ಪಕ್ಕಾ ಮೂವಿ ಮಾಫಿಯಾ. ಚಿತ್ರತಂಡದವರೇ ನಿರ್ಧಾರ ಮಾಡುತ್ತದೆ ಯಾರ ಸಿನಿಮಾ ಹಿಟ್ ಆಗಬೇಕು ಯಾರದ್ದು ಫ್ಲಾಪ್ ಆಗಬೇಕು ಎಂದು. ಜನರು ನಿರ್ಧರಿಸುತ್ತಾರೆ ಯಾರಿಗೆ ಹೈಫ್ ನೀಡಬೇಕು ಯಾರನ್ನು ಬಾಯ್ಕಾಟ್ ಮಾಡಬೇಕು ಎಂದು. ಇಲ್ಲಿ ಎಲ್ಲವೂ ಎಕ್ಸಪೋಸ್ ಆಗುತ್ತಿದೆ’ ಎಂದಿದ್ದಾರೆ.
