• March 14, 2026

ವೈರಲ್ ಆದ ನಗ್ನ ಫೋಟೋ ನನ್ನದಲ್ಲ: ಶಾಕಿಂಗ್ ಹೇಳಿಕೆ ನೀಡಿದ ನಟ ರಣವೀರ್ ಸಿಂಗ್

ಬಾಲಿವುಡ್ ನಟ ರಣವೀರ್ ಸಿಂಗ್ ಒಂದಲ್ಲ ಒಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರ್ತಾರೆ. ಇತ್ತೀಚೆಗೆ ಪೇಪರ್ ಮ್ಯಾಗಝೀನ್ ಗಾಗಿ ನಟ ರಣವೀರ್ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿ ಸಾಕಷ್ಟು ವಿವಾದಕ್ಕೆ ಸಿಲುಕಿಕೊಂಡಿದ್ದರು. ಇದೀಗ ವಿಚಾರಣೆ ವೇಳೆ ರಣವೀರ್ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ರಣವೀರ್ ಸಿಂಗ್ ಬೆತ್ತಲೆ ಫೋಟೋ ಶೂಟ್ ನಲ್ಲಿ ಕಾಣಿಸಿಕೊಂಡಿದ್ದು ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಮಹಿಳೆಯರ ಗೌರವಕ್ಕೆ ಧಕ್ಕೆ ಮಾಡಲಾಗಿದೆ ಎಂದು ಎಫ್ ಐ ಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ‘ಆಗಸ್ಟ್​ 30ರ ಒಳಗೆ ಮುಂಬೈನ ಚೆಂಬೂರ್​ ಪೊಲೀಸ್​ ಠಾಣೆಗೆ ಬಂದು ಹೇಳಿಕೆ ದಾಖಲಿಸುವಂತೆ ರಣವೀರ್​ ಸಿಂಗ್ ಗೆ ನೋಟಿಸ್​ ನೀಡಲಾಗಿತ್ತು. ಅಂತೆಯೇ ಆಗಸ್ಟ್  29ರ ಬೆಳಗ್ಗೆ 7.30ಕ್ಕೆ ಹಾಜರಾದ ರಣವೀರ್ 9.30ರ ವರೆಗೆ ವಿಚಾರಣೆ ಎದುರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಪ್ರತಿಯೊಂದು ಫೋಟೋಗಳನ್ನು ಪೊಲೀಸರು ರಣವೀರ್ ಸಿಂಗ್ ಗೆ ತೋರಿಸಿದ್ದಾರೆ.  ಈ ವೇಳೆ ವೈರಲ್ ಆದ ಒಂದು ಫೋಟೋ ತಮ್ಮದಲ್ಲ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಗುಪ್ತಾಂಗ ಕಾಣುವ ರೀತಿಯಲ್ಲಿ ಇರುವ ಬೇರೆ ಯಾರದ್ದೋ ಫೋಟೋಗೆ ತಮ್ಮ ಮುಖವನ್ನು ಜೋಡಿಸಲಾಗಿದೆ ಅಂತ ರಣವೀರ್ ಹೇಳಿದ್ದಾರೆ. ಪೇಪರ್ ಮ್ಯಾಗಝೀನ್ ಗಾಗಿ ಬೆತ್ತಲಾದ ನಟ ರಣವೀರ್ ಸಿಂಗ್ ಅವುಗಳ ಫೋಟೋವನ್ನು ಜುಲೈ 22ರಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅವು ಕ್ಷಣಾರ್ಧದಲ್ಲಿ ವೈರಲ್ ಆಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಸಾಕಷ್ಟು ಮಂದಿ ರಣವೀರ್ ಪರವಾಗಿ ನಿಂತರೆ ಮತ್ತೊಂದಷ್ಟು ಮಂದಿ ರಣವೀರ್ ನಡೆಯನ್ನು ವಿರೋಧಿಸಿದ್ದರು. ಅಲ್ಲದೆ ಸಾಕಷ್ಟು ಕಡೆಗಳಲ್ಲಿ ರಣವೀರ್ ಫೋಟೋ ಶೂಟ್ ಕುರಿತು ಎಫ್ ಐ ಆರ್ ಕೂಡ ದಾಖಲಾಗಿತ್ತು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now