ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನಟಿ ಶ್ರೀಲೀಲಾ ತಾಯಿ ವಿರುದ್ಧ FIR: ನೂರಾರು ಕೋಟಿ ಡೀಲ್ ಕುದುರಿಸಲು ಹೋದ ಸ್ವರ್ಣಲತಾ ಎಸ್ಕೇಪ್
ಸೆ,10ರಂದು ಬೆಳಗ್ಗೆ 11 ಗಂಟೆಗೆ ಯುನಿವರ್ಸಿಟಿ ಅಡ್ಮಿನ್ ಬ್ಲಾಕ್ ಗೆ ನುಗ್ಗಿದ್ದ ಸುರ್ಣಲತಾ ಹಾಗೂ ಇನ್ನೂ ಕೆಲವರು ಗಲಾಟೆ ಮಾಡಿದ್ದಾರೆ. ಸ್ವರ್ಣಲತಾ ಹಾಗೂ ಮಧುಕರ್ ಗುಂಪು ಕಟ್ಟಿಕೊಂಡು, ಮರಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ಯೂನಿವರ್ಸಿಟಿಯಲ್ಲಿದ್ದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದಾರ ಎಂದು ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಗುಂಪುಕಟ್ಟಿಕೊಂಡು ಬಂದು ಬೆದರಿಕೆ ಹಾಕಿರುವ ಎಲ್ಲರ ಮೇಲೂ ಕ್ರಮ ತೆಗೆದುಕೊಳ್ಳುವಂತೆ ಯುನಿವರ್ಸಿಟಿಯ ರಿಜಿಸ್ಟರ್ ಡಾ.ನಿವೇದಿತಾ ಮಿಶ್ರಾ ಅನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇತ್ತ ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಸ್ವರ್ಣಲತಾ ಎಸ್ಕೇಪ್ ಆಗಿದ್ದಾರೆ.
