ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕೆಜಿಎಫ್ 2 ಬಳಿಕ ಸ್ಯಾಂಡಲ್ ವುಡ್ ಗೆ ಮತ್ತೆ ಸಂಜಯ್ ದತ್: ಧ್ರುವ ಸರ್ಜಾ ಮುಂದೆ ಅಬ್ಬರಿಸಲು ರೆಡಿಯಾದ ‘ಅಧೀರ’
ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಹಾಗೂ ಜೋಗಿ ಪ್ರೇಮ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲು ಸಂಜಯ್ ದತ್ ರನ್ನು ಕರೆ ತರುವುದು ಬಹುತೇಕ ಖಚಿತವಾಗಿದೆಯಂತೆ. ಮೂಲಗಳ ಪ್ರಕಾರ ಕಥೆ ಕೇಳಿರೋ ಸಂಜಯ್ ದತ್ ಚಿತ್ರದಲ್ಲಿ ನಟಿಸಲು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸಂಜಯ್ ದತ್ ಸದ್ಯದಲ್ಲೇ ಗಾಂಧಿನಗರಕ್ಕೆ ಬರಲಿದ್ದಾರೆ.
ಧ್ರುವ-ಪ್ರೇಮ್ ಕಾಂಬಿನೇಷನ್ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡಿದ್ದು, ಏಪ್ರಿಲ್ ತಿಂಗಳಿನಿಂದಲೇ ಚಿತ್ರಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಟೈಟಲ್ ಟೀಸರ್ ಅನ್ನು ಅನಾವರಣಗೊಳಿಸಲು ಪ್ರೇಮ್ ಸಿದ್ದತೆ ಮಾಡಿಕೊಳ್ತಿದ್ದಾರೆ. 1968-1978ರ ನಡುವೆ ನಡೆಯುವ ನೈಜ ಘಟನೆಯನ್ನು ಆಧರಿಸಿ ಕಥೆ ರೆಡಿಮಾಡಲಾಗಿದ್ದು ಚಿತ್ರಕ್ಕಾಗಿ ದೈತ್ಯಾಕಾರದ ಸೆಟ್‌ಗಳನ್ನು ನಿರ್ಮಿಸಲು ಚಿತ್ರತಂಡ ಮುಂದಾಗಿದೆ.
