• March 15, 2026

ರಮ್ಯಾ ನನ್ನ ಮನೆಯಲ್ಲಿಲ್ಲ: ಸ್ಪಷ್ಟನೆ ನೀಡಿದ ನಟ ನರೇಶ್

ಕಳೆದ ಕೆಲ ತಿಂಗಳುಗಳಿಂದ ಸೈಲೆಂಟ್ ಆಗಿದ್ದ ನಟ ನರೇಶ್ ಹಾಗೂ ರಮ್ಯಾ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಇಂದು ಏಕಾಏಕಿ ರಮ್ಯಾ, ನರೇಶ್ ಮನೆಗೆ ತೆರಳಿದ್ದು ಆತನೊಂದಿಗೆ ಜೀವನ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೆ ಹೇಗಾದರೂ ಮಾಡಿ ಪತಿಯನ್ನು ಪವಿತ್ರಾ ಲೋಕೇಶ್ ರಿಂದ ದೂರ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿತ್ತು. ಇದೀಗ ಈ ಕುರಿತಾಗಿ ನರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮನೆಯಲ್ಲಿ ರಮ್ಯಾ ಇದ್ದಾರೆ, ನನ್ನೊಂದಿಗೆ ಸಂಸಾರ ಮಾಡಲು ಬಂದಿದ್ದಾರೆ ಎನ್ನುವುದೆಲ್ಲಾ ಸುಳ್ಳು ಸುದ್ದಿ. ಅದು ಎಂದಿಗೂ ಸಾಧ್ಯವಾಗದೇ ಇರುವ ಕೆಲಸ. ಯಾರೋ ಮಾನಸಿಕ ಸರಿ ಇಲ್ಲದ ವ್ಯಕ್ತಿಯೊಬ್ಬ ಈ ರೀತಿ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾನೆ. ರಮ್ಯಾ ಮತ್ತು ನಾನು ಎಂದಿಗೂ ಮತ್ತೆ ಒಂದಾಗಲು ಸಾಧ್ಯವೇ ಇಲ್ಲ. ಡಿವೋರ್ಸ್ ಕೇಸ್ ಕೋರ್ಟಿನಲ್ಲಿದ್ದು, ಕೋರ್ಟ್ ತೀರ್ಪಿಗಾಗಿ ನಾನು ಕಾಯುತ್ತಿದ್ದೇನೆ. ಯಾರೂ ವಂದತಿಗಳನ್ನು ನಂಬಬಾರದು ಎಂದು ನರೇಶ್ ಸ್ಪಷ್ಟನೆ ನೀಡಿದ್ದಾರೆ. ರಮ್ಯಾ ಯಾವುದೇ ರೀತಿಯಲ್ಲೂ ನನ್ನನ್ನು ಸಂಪರ್ಕಿಸಿಲ್ಲ. ಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದೇನೆ. ಅಲ್ಲದೆ ಈ ಬಗ್ಗೆ ಇಲ್ಲ ಸಲ್ಲದ ರೂಮರ್ ಗಳನ್ನು ಹಬ್ಬಿಸುತ್ತಿರುವವರ ವಿರುದ್ಧವು ಕ್ರಮ ಕೈಗೊಳ್ಳುವುದಾಗಿ ನರೇಶ್ ಹೇಳಿದ್ದಾರೆ. ಮೂರನೇ ಪತ್ನಿ ರಮ್ಯಾ ರಘುಪತಿಯಿಂದ ದೂರವಾದ ನರೇಶ್ ಪವಿತ್ರಾ ಲೋಕೇಶ್ ಜೊತೆ ವಾಸವಾಗಿದ್ದಾರೆ ಎನ್ನಲಾಗಿತ್ತು. ಅದಕ್ಕೆ ಪುಷ್ಠ ನೀಡುವಂತೆ ಇಬ್ಬರು ಮೈಸೂರಿನ ಹೋಟೆಲ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ರಮ್ಯಾ ಹಾಗೂ ನರೇಶ್ ಮಧ್ಯೆ ದೊಡ್ಡ ರಾದ್ದಾಂತವಾಗಿತ್ತು. ಅತ್ತ ನರೇಶ್ ಕೋರ್ಟ್ ನಲ್ಲಿ ನೋಡಿಕೊಳ್ಳುತ್ತೇನೆ ಎಂದಿದ್ದರು. ಇತ್ತ ರಮ್ಯಾ ತಾಯಿಯ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಕೆಲ ತಿಂಗಳ ಕಾಲ ಸೈಲೆಂಟ್ ಆಗಿದ್ದ ರಮ್ಯಾ ಹಾಗೂ ನರೇಶ್ ಪ್ರಕರಣ ಇದೀಗ ಮತ್ತೆ ಸುದ್ದಿಯಾಗೋಕೆ ಶುರುವಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now