ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕೆಜಿಎಫ್ 2 ಬಳಿಕ ಹೆಚ್ಚಾಯ್ತು ಸಂಜಯ್ ದತ್ ಡಿಮ್ಯಾಂಡ್: ಮತ್ತೆ ವಿಲನ್ ಆಗಿ ನಟಿಸಲು 10 ಕೋಟಿ ಡಿಮ್ಯಾಂಡ್ ಮಾಡಿದ ನಟ?
ಕೆಜಿಎಫ್ ಚಿತ್ರದ ಬಳಿಕ ಸಂಜಯ್ ದತ್ ಕಾಲ್ ಶೀಟ್ ಗಾಗಿ ನಿರ್ಮಾಪಕರು ಮುಗಿ ಬಿದ್ದಿದ್ದಾರೆ. ಸ್ಟಾರ್ ನಟರ ಎದುರು ಅಬ್ಬರಿಸೋಕೆ ಖಡಕ್ ವಿಲನ್ ಆಗಿ ಸಂಜಯ್ ದತ್ ಸರಿ ಎಂದು ಸಾಕಷ್ಟು ನಿರ್ಮಾಪಕರು ತೀರ್ಮಾನಿಸಿದ್ದಾರೆ. ಹೀಗಾಗಿ ಸಂಜಯ್ ದತ್ ಕೇಳಿದಷ್ಟು ಸಂಭಾವನೆ ನೀಡಿ ಕರೆತರೋಕೆ ರೆಡಿಯಾಗಿದ್ದಾರೆ. ಮೂಲಗಳ ಪ್ರಕಾರ ದಳಪತಿ ವಿಜಯ್ ನಟನೆಯ ಸಿನಿಮಾದಲ್ಲಿ ವಿಲನ್ ಆಗಿ ನಟಿಸೋಕೆ ಸಂಜಯ್ ಗೆ ಆಫರ್ ನೀಡಲಾಗಿದೆಯಂತೆ.
ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾದ ಮೂಲಕ ಭರ್ಜರಿ ಗೆಲುವು ಸಾಧಿಸಿರುವ ನಿರ್ದೇಶಕ ಲೋಕೇಶ್ ಕನಗರಾಜ್ ದಳಪತಿ ವಿಜಯ್ ಜೊತೆ ಸಿನಿಮಾ ಮಾಡಲಿದ್ದಾರೆ. ಆ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡುವಂತೆ ಸಂಜಯ್ ದತ್ ಅವರಿಗೆ ಆಫರ್ ನೀಡಲಾಗಿದ್ದು, ಅದಕ್ಕಾಗಿ ಸಂಜಯ್ ದತ್ ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ.
ಒಟ್ನಲ್ಲಿ ಕೆಜಿಎಫ್ ಚಾಪ್ಟರ್ 2 ಬಳಿಕ ಸಂಜಯ್ ದತ್ ಗೆ ಡಿಮ್ಯಾಂಡ್ ಹೆಚ್ಚುತ್ತಿದ್ದು ಅಧೀರನ ಲುಕ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಮೋಡಿ ಮಾಡುವಲ್ಲಿ ಸಕ್ಸಸ್ ಆಗಿದೆ.
