ತಮಿಳು ಧಾರಾವಾಹಿ ನಟಿ ಕಂ ನಿರೂಪಕಿ ಮಹಾಲಕ್ಷ್ಮೀ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಕಳೆದ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸಾಕಷ್ಟು ಟ್ರೋಲಿಗರು ಇವರನ್ನು ಮಿಸ್ ಮ್ಯಾಚ್ ಎಂದು ಕರೆದಿದ್ದಾರೆ. ಆದ್ರೆ ಇದ್ಯಾವುದಕ್ಕೂ ಈ ಜೋಡಿಗಳು ತಲೆ ಕೆಡಿಸಿಕೊಂಡಿರಲಿಲ್ಲ. ಇದೀಗ ಮಹಾಲಕ್ಷ್ಮೀ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ನನ್ನ ಗಂಡನಿಗೆ ಅವಮಾನ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕಳೆದ ವಾರ ತಿರುಪತಿಯಲ್ಲಿ ಮಹಾಲಕ್ಷ್ಮೀ ಹಾಗೂ ರವೀಂದರ್ ಹಸೆಮಣೆ ಏರಿದ್ದರು. ಮೊದಲ ಇದು ಯಾವುದೋ ಸಿನಿಮಾದ ಫೋಟೋ ಅಂತಲೆ ಸಾಕಷ್ಟು ಮಂದಿ ಅಂದುಕೊಂಡಿದ್ರು. ಆದರೆ ಯಾವಾಗ ಮಹಾಲಕ್ಷ್ಮೀ ಮದುವೆಯ ಫೋಟೋ ಹಂಚಿಕೊಂಡರೋ ಆಗ ಸಾಕಷ್ಟು ಮಂದಿ ಕಾಲೆಳೆದಿದ್ದರು. ನೆಟ್ಟಿಗರು ಈ ಜೋಡಿಯ ಕುರಿತಾಗಿ ನಾನಾ ರೀತಿಯ ಕಾಮೆಂಟ್ ಮಾಡುತ್ತಿರುವುದು ಈ ಜೋಡಿಗಳಿಗೂ ಗೊತ್ತಾಗಿದ್ದು ಇದೀಗ ಮಹಾಲಕ್ಷ್ಮೀ ಇನ್ ಸ್ಟಾಗ್ರಾಂ ಖಾತೆಯಲ್ಲಿ ಲೈವ್ ಮೂಲಕ ಮಾತನಾಡಿದ್ದಾರೆ.
ಅಂದಹಾಗೆ ಮಹಾಲಕ್ಷ್ಮೀ ಹಾಗೂ ರವೀಂದರ್ ಇಬ್ಬರಿಗೂ ಇದು ಎರಡನೇ ಮದುವೆ. ಮಹಾಲಕ್ಷ್ಮೀಗೆ ಎಂಟು ವರ್ಷದ ಮಗನಿದ್ದು ಕೆಲ ವರ್ಷಗಳ ಹಿಂದೆಯೇ ಪತಿಯಿಂದ ದೂರವಾಗಿದ್ದಾರೆ. ಅಲ್ಲದೆ ಕಳೆದ ವರ್ಷವೇ ಮಹಾಲಕ್ಷ್ಮೀ ಮೊದಲ ಗಂಡನಿಗೆ ಎರಡನೇ ಮದುವೆಯಾಗಿದೆ. ಇತ್ತ ಹೆಂಡತಿಯಿಂದ ದೂರವಾಗಿದ್ದ ರವೀಂದರ್ ಚಂದ್ರಶೇಖರ್ ಮಹಾಲಕ್ಷ್ಮೀ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

ರವೀಂದರ್ ನಿರ್ಮಾಣದ ಸಾಕಷ್ಟು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಮಹಾಲಕ್ಷ್ಮೀ ನಟಿಸಿದ್ದು ಈ ವೇಳೆ ಇಬ್ಬರ ನಡುವೆ ಪ್ರೀತಿ ಶುರುವಾಗಿದೆ. ಆದರೆ ಇವರ ಪ್ರೀತಿ ವಿಷಯ ಯಾರಿಗೂ ತಿಳಿದಿರಲಿಲ್ಲ. ಏಕಾಏಕಿ ಮದುವೆಯಾಗುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಮದುವೆಯಾದ ಬಳಿಕ ಪ್ರೈವೆಟ್ ಜೆಟ್ ನಲ್ಲಿ ಜೋಡಿ ಹಕ್ಕಿಗಳು ಇಸ್ರೇಲ್ ಗೆ ಹನಿಮೂನ್ ಹೋಗಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ನಾವು ಹೋಗಿದ್ದು ಹನಿಮೂನ್ ಗಲ್ಲ, ದೇವಸ್ಥಾನಕ್ಕೆ ಎಂದಿದ್ದಾರೆ. ಇನ್ನೂ ಮಹಾಲಕ್ಷ್ಮೀಗೆ ಸಾಕಷ್ಟು ದುಬಾರಿ ಉಡುಗೊರೆಗಳನ್ನು ರವೀಂದರ್ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಮಹಾಲಕ್ಷ್ಮೀ ಯಾವುದೇ ಮಾಹಿತಿ ಬಿಟ್ಟು ಕೊಟ್ಟಿಲ್ಲ.