• January 2, 2026

ಆರ್ಯವರ್ಧನ್ ಗೆ ಕಳ್ಳ ಸ್ವಾಮೀಜಿ ಎನ್ನಲೆ ಎಂದು ವೈರಲ್ ಹುಡುಗಿ: ಸೋನು ಗೌಡ ಮಾತಿಗೆ ಗರಂ ಆದ ಗುರೂಜಿ

ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಓಟಿಟಿ ಬಿಗ್ ಬಾಸ್ ಕಾರ್ಯಕ್ರಮ ಮುಗಿಯಲು ಇನ್ನೂ ಕೆಲವೇ ಕೆಲವು ದಿನಗಳ ಮಾತ್ರವೇ ಭಾಕಿ ಇದೆ. ಬಿಗ್ ಬಾಸ್ ಓಟಿಟಿ ವಿನ್ನರ್ ಕಿರೀಟ ಮುಡಿಗೇರಿಸಿಕೊಳ್ಳಲು ಸ್ಪರ್ಧಿಗಳು ಮುಗಿ ಬಿದಿದ್ದಾರೆ. ಈ ಮಧ್ಯೆ ಸೋನು ಗೌಡ ಉಳಿದ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ದಿನದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಬ್ರೇಕ್ ಇಲ್ಲದ ಮಾತುಗಳಿಂದಲೇ ಅದೆಷ್ಟೋ ಭಾರಿ ಇತರ ಸ್ಪರ್ಧಿಗಳ ಕೆಂಗಣ್ಣಿಗು ಗುರಿಯಾಗಿದ್ದಾರೆ. ಈ ಮಧ್ಯೆ ಮತ್ತೆ ತಮ್ಮ ಮಾತಿನಿಂದ ಸೋನು ಸುದ್ದಿಯಾಗಿದ್ದಾರೆ. ಮನೆ ಮಂದಿ ಮಾತನಾಡುತ್ತ ಕುಳಿತಿದ್ದ ವೇಳೆ ಸೋನು ಆರ್ಯವರ್ಧನ್ ಗುರೂಜಿಗೆ ಡವ್ ರಾಜ ಎಂದಿದ್ದಾರೆ. ಅದನ್ನು ಕೇಳಿದ ಗುರೂಜಿ ಸೋನು ಮೇಲೆ ಕೋಪ ಮಾಡಿಕೊಂಡರು. ಜೊತೆಗೆ ಡವ್ ರಾಜ ಎಂದರೆ ಸರಿ ಇರಲ್ಲ ಎಂದು ವಾರ್ನ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸೋನು ಗೌಡ, ಹಾಗಿದ್ರೆ ನಾನು ನಿಮಗೆ ಕಳ್ಳ ಸ್ವಾಮೀಜಿ ಎಂದು ಹೇಳಲೆ ಎಂದಿದ್ದಾರೆ. ಸೋನು ಮಾತಿಗೆ ಗುರೂಜಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸೋನು ಆ ರೀತಿ ಹೇಳಿದ್ದು ಉಳಿದ ಸದಸ್ಯರಿಗೆ ಸರಿ ಎನಿಸಿಲ್ಲ. ಸೋನು ಮಾತಿಗೆ ಮನೆಯಿಂದ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಸಾನ್ಯಾ ಐಯ್ಯರ್ ವಯಸ್ಸಿನಲ್ಲಿ ಹಿರಿಯರಾಗಿರೋ ಆರ್ಯವರ್ಧನ್ ಗುರೂಜಿ ಅವರಿಗೆ ನೀನು ಹೀಗೆ ಹೇಳಿದ್ದು ಸರಿಯಲ್ಲ ಎಂದಿದ್ದಾರೆ.ಇದಕ್ಕೆ ಉತ್ತರಿಸಿದ ಸೋನು ನಾನು ಕಳ್ಳ ಸ್ವಾಮಿ ಎಂದಿಲ್ಲ. ಕಳ್ಳ ಸ್ವಾಮೀಜಿ ಎಂದು ಹೇಳಬಹುದು ಎಂದು ಕೇಳಿದೆ ಅಷ್ಟೇ ಎಂದು ಸಮಜಾಯಿಷಿ ನೀಡೋಕೆ ಮುಂದಾಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now