ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನಿಖಿಲ್ ಕುಮಾರಸ್ವಾಮಿ ಜೊತೆ ನೀವು ನಟಿಸ್ಬೇಕು? ಹಾಗಾದ್ರೆ ನೀವು ಮಾಡಬೇಕಿರೋದಿಷ್ಟೇ
ಸಿನಿಮಾದಲ್ಲಿ ನಟಿಸಬೇಕು ಎಂಬ ಆಸಕ್ತಿ ಇರುವವರಿಗೆ ಚೆನ್ನಾಂಬಿಕಾ ಫಿಲ್ಮ್ಸ್ ಬ್ಯಾನರ್ ಒಳ್ಳೆ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ. ಅನಿತಾ ಕುಮಾರಸ್ವಾಮಿ ನಿರ್ಮಾಣದ ಸಿನಿಮಾದಲ್ಲಿ ನಟಿಸಲು ಹೊಸ ಪ್ರತಿಭೆಗಳಿಗಾಗಿ ಚಿತ್ರತಂಡ ಹುಡುಕಾಟ ನಡೆಸುತ್ತಿದ್ದೆ.
ಜಾಗ್ವಾರ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಿಖಿಲ್ ಕುಮಾರಸ್ವಾಮಿ ಬಳಿಕ ಸೀತಾರಾಮ ಕಲ್ಯಾಣ, ಕುರುಕ್ಷೇತ್ರ ಹಾಗೂ ರೈಡರ್ ಸಿನಿಮಾದಲ್ಲಿ ನಟಿಸಿದ್ದು ಇದೀಗ ಐದನೇ ಸಿನಿಮಾಗೆ ತಯಾರಿ ನಡೆಸುತ್ತಿದ್ದಾರೆ. ನಿಖಿಲ್ ಚಿತ್ರದಲ್ಲಿ ನಟಿಸಲು ಅನುಭವಿ ಕಲಾವಿದರ ಜೊತೆ ಹೊಸ ಪ್ರತಿಭೆಗಳಿಗೂ ಅವಕಾಶ ನೀಡಲಾಗಿದೆ. ಜೊತೆಗೆ ಡ್ಯಾನ್ಸ್ ಹಾಗೂ ಫೈಟ್ ಕಲಿತಿರುವವರಿಗೆ ವಿಶೇಷ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.
ನೀವು ನಿಖಿಲ್ ನಟನೆಯ ಮುಂದಿನ ಸಿನಿಮಾದಲ್ಲಿ ನಟಿಬೇಕು ಅಂದರೆ ನಿಮ್ಮ ಸ್ವವಿವರ, ಫೋಟೋ ಜೊತೆಗೆ ಒಂದು ನಿಮಿಷದ ನಟನೆಯ ವಿಡಿಯೋವನ್ನು ಚೆನ್ನಾಂಬಿಕಾ ಫಿಲ್ಮ್ಸ್ ಇಮೇಲ್ ಐಡಿಗೆ ಮೇಲ್ ಮಾಡಿ. ಅರ್ಹ ಪ್ರತಿಭೆಗಳನ್ನು ಆಡಿಷನ್ ಗೆ ಕರೆಯಲಾಗುತ್ತಿದೆ. ಆಡಿಷನ್ ನಲ್ಲಿ ಆಯ್ಕೆಯಾದವರು ಚೆನ್ನಾಂಬಿಕಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುವ ಇನ್ನೂ ಹೆಸರಿಡ ನಿಖಿಲ್ ನಟನೆಉ ಮುಂದಿನ ಸಿನಿಮಾಗೆ ಆಯ್ಕೆಯಾಗಲಿದ್ದಾರೆ.
