ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸೂಪರ್ ಸ್ಟಾರ್ ಮನೆಯಲ್ಲಿ ಸಂಭ್ರಮ: ಗಂಡು ಮಗುವಿಗೆ ಜನ್ಮ ನೀಡಿದ ಸೌಂದರ್ಯ ರಜನಿಕಾಂತ್
ಸೌಂದರ್ಯಾ ಅವರಿಗೆ ಈಗಾಗ್ಲೆ ವೇದ್ ಎಂಬ ಪುತ್ರನಿದ್ದಾನೆ. ಈಗ ಎರಡನೇ ಮಗನ ಆಗಮನದಿಂದ ಖುಷಿ ಆಗಿದ್ದು, ಮಗನಿಗೆ ವೀರ್ ರಜನಿಕಾಂತ್ ವನಂಗಮುಡಿ ಎಂದು ಹೆಸರು ಇಡಲಾಗಿದೆ. ‘ದೇವರ ಅಗಾಧವಾದ ಕೃಪೆ ಮತ್ತು ತಂದೆ-ತಾಯಿ ಆಶೀರ್ವಾದದಿಂದ ಸೆಪ್ಟೆಂಬರ್ 11ರಂದು ವೀರ್ ರಜನಿಕಾಂತ್ ವನಂಗಮುಡಿಗೆ ನಾನು, ವಿಶಾಗನ್ ಮತ್ತು ವೇದ್ ಸ್ವಾಗತ ಕೋರಿದ್ದೇವೆ’ ಎಂದು ಸೌಂದರ್ಯಾ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜೊತೆಗಿದ್ದ ವೈದ್ಯರಿಗೆ ಸೌಂದರ್ಯ ಧನ್ಯವಾದ ಅರ್ಪಿಸಿದ್ದಾರೆ.
2010ರಲ್ಲಿ ಸೌಂದರ್ಯಾ ರಜನಿಕಾಂತ್,ಅಶ್ವಿನ್ ರಾಮ್ಕುಮಾರ್ ಜೊತೆ ಹಸೆಮಣೆ ಏರಿದ್ದರು. ಈ ಜೋಡಿಗೆ 2015ರಲ್ಲಿ ಮೊದಲ ಮಗು ಜನಿಸಿತು. 2017ರಲ್ಲಿ ಸೌಂದರ್ಯಾ ಮತ್ತು ಅಶ್ವಿನ್ ವಿಚ್ಛೇದನ ಪಡೆದುಕೊಂಡರು. 2019ರಲ್ಲಿ ವಿಶಾಗನ್ ವನಂಗಮುಡಿ ಜೊತೆ ಸೌಂದರ್ಯಾ ಎರಡನೇ ಮದುವೆ ಮಾಡಿಕೊಂಡರು. ಈಗ ಈ ದಂಪತಿಗೆ ಮಗು ಜನಿಸಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ.
