ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
‘ಬ್ರಹ್ಮಾಸ್ತ್ರ’ಚಿತ್ರದಲ್ಲಿ ರಣಬೀರ್ ತಾಯಿ ಪಾತ್ರ ಮಾಡಿದ ರಣಬೀರ್ ಮಾಜಿ ಪ್ರೇಯಸಿ: ವೈರಲ್ ಆಯ್ತು ಫೋಟೋ
ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಶಿವ ಎಂಬ ಪಾತ್ರದಲ್ಲಿ ರಣಬೀರ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ದೃಶ್ಯವೊಂದಲ್ಲಿ ದೀಪಿಕಾ ಪಡುಕೋಣೆ ಮಗುವೊಂದನ್ನು ಹಿಡಿದುಕೊಂಡು ಕಾಣಿಸಿಕೊಂಡಿದ್ದಾರೆ. ಹೀಗಾಗಿ ಈ ಸಿನಿಮಾದಲ್ಲಿ ದೀಪಿಕಾ ರಣಬೀರ್ ಕಪೂರ್ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಸದ್ಯ ಈ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ `ಬ್ರಹ್ಮಾಸ್ತ್ರ’ ಚಿತ್ರಕ್ಕೆ ಸಾಕಷ್ಟು ಅಡೆತಡೆ ಎದುರಾಗಿದ್ದರು ಬ್ರಹ್ಮಾಸ್ತ್ರ ಎಲ್ಲವನ್ನು ಮೆಟ್ಟಿ ನಿಂತಿದೆ. ರಿಲೀಸ್ ಆದ ಎರಡೇ ದಿನಕ್ಕೆ ಚಿತ್ರ 160 ಕೋಟಿ ಕಲೆಕ್ಷನ್ ಮಾಡಿದೆ. ಚಿತ್ರದ ಕಥೆ ಮತ್ತು ಸಂಭಾಷಣೆಗೆ ವಿಮರ್ಶಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದೂ ಪುರಾಣವನ್ನು ಫ್ಯಾಂಟಸಿ ಅಂಶಗಳೊಂದಿಗೆ ಬೆರೆಸುವ ನಿರ್ದೇಶಕ ಅಯನ್ ಮುಖರ್ಜಿ ಅವರ ದೃಷ್ಟಿಕೋನವನ್ನು ಹಲವರು ಶ್ಲಾಘಿಸಿದ್ದಾರೆ.
