ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬಟ್ಟೆ ಬಗ್ಗೆ ಮಾತನಾಡಿದ್ದಕ್ಕೆ ಪಬ್ಲಿಕ್ ನಲ್ಲೇ ಪಾಪರಾಜಿಗಳ ಮೇಲೆ ಗರಂ ಆದ ಉರ್ಫಿ
ಇವತ್ತು ಸರಿಯಾಗಿ ಬಟ್ಟೆ ಧರಿಸಿ ಬಂದಿದ್ದಾಳೆ ಎಂದು ಪಾಪರಾಜಿಯೊಬ್ಬರು ವ್ಯಂಗ್ಯವಾಗಿ ಕಾಮೆಂಟ್ ಮಾಡಿರೋದು ಉರ್ಫಿ ಕಿವಿಗೆ ಬಿದ್ದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಉರ್ಫಿ, ನಿಮ್ಮ ತಾಯಿ, ತಂಗಿ, ಗರ್ಲ್‌ಫ್ರೆಂಡ್ ಬಟ್ಟೆಯ ಬಗ್ಗೆ ಕೆಟ್ಟದಾಗಿ ಮಾತನಾಡಿ, ನನ್ನ ಬಟ್ಟೆಯ ಬಗ್ಗೆ ಮಾತನಾಡಬೇಡಿ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಮತ್ತೆ ಹೀಗೆ ಮಾತನಾಡಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ.
ಎಲ್ಲರೆದುರೆ ಪಾಪಾರಾಜಿಗಳ ವಿರುದ್ಧ ಗರಂ ಆದ ಊರ್ಫಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಊರ್ಫಿ ಮಾಡಿದ್ದು ಸರಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದರೆ, ಮತ್ತೊಂದಷ್ಟು ಮಂದಿ ಇಷ್ಟು ಒರಟಾಗಿ ನಡೆದುಕೊಳ್ಳಬಾರದಿತ್ತು ಎಂದಿದ್ದಾರೆ.
