ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಡಾಲಿ ಧನಂಜಯ್ ನಟನೆಯ 25ನೇ ಚಿತ್ರ ‘ಹೊಯ್ಸಳ’ ರಿಲೀಸ್ ಡೇಟ್ ಫಿಕ್ಸ್
ಹೊಯ್ಸಳ ಧನಂಜಯ್ ನಟನೆಯ 25ನೇ ಸಿನಿಮಾವಾಗಿದ್ದು ಸಾಕಷ್ಟು ಅದ್ದೂರಿಯಾಗಿ ರೆಡಿಯಾಗುತ್ತಿದೆ. ವಿಜಯ್ ಎನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಯ್ಸಳ ಸಿನಿಮಾ ಮುಂದಿನ ವರ್ಷ ಮಾರ್ಚ್ 30ರಂದು ತೆರೆಗೆ ಬರಲಿದೆ. , ಹೊಯ್ಸಳ ಉತ್ಸವಕ್ಕೆ ಎಲ್ಲರೂ ರೆಡಿಯಾಗಿರಿ ಎಂದು ನಿರ್ಮಾಪಕರು ಹೇಳಿದ್ದಾರೆ.
ಡಾಲಿಗೆ ಜೋಡಿಯಾಗಿ ನಟಿ ಅಮೃತಾ ಅಯ್ಯಂಗಾರ್ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕಾಗಿ ಧನಂಜಯ್ ಒಂದಷ್ಟು ತೂಕ ಕಳೆದುಕೊಂಡು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ದುನಿಯಾ ವಿಜಯ್ ನಟನೆ ಸಲಗ ಸಿನಿಮಾದಲ್ಲಿ ಡಾಲಿ ಧನಂಜಯ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, ಆದರೆ ಅದಕ್ಕಿಂತಲೂ ಸಾಕಷ್ಟು ಭಿನ್ನವಾಗಿ ಹೊಯ್ಸಳ ಸಿನಿಮಾದಲ್ಲಿ ಕಾಣಿಸಿಕೊಳ್ಳಿದ್ದಾರಂತೆ.
