ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಡಿವೋರ್ಸ್ ಬಳಿಕ ಮೈತೋರಿಸೋದು ಜಾಸ್ತಿಯಾಗಿದೆ: ಸಮಂತಾ ವಿರುದ್ಧ ಗರಂ ಆದ ನೆಟ್ಟಿಗರು
ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲಿ ಸಮಂತಾರನ್ನು ಬೋಲ್ಡ್ ಅವತಾರದಲ್ಲಿ ನೋಡಿದ ಅಭಿಮಾನಿಗಳು ಸುಸ್ತಾಗಿದ್ದರು. ಇದೀಗ ಸಮಂತ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಯಾವುದೇ ಕಾರ್ಯಕ್ರಮವಿರಲಿ ಸಖತ್ ಬೋಲ್ಡ್ ಡ್ರಸ್ ನಲ್ಲಿ ಆಗಮಿಸುತ್ತಾರೆ. ಇದು ಆಕೆಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಡಿವೋರ್ಸ್ ಬಳಿಕ ಸಮಂತಾರ ಬಟ್ಟೆಯೂ ಸಣ್ಣಗಾಗುತ್ತಿದೆ. ಸಾಕಷ್ಟು ಮೈ ಕಾಣುವಂತಹ ಬಟ್ಟೆಗಳನ್ನು ಆಕೆ ಧರಿಸುತ್ತಿದ್ದಾಳೆ. ಡಿವೋರ್ಸ್ ಅಗಿದ್ದೇ ತಡ ಬೇಕಾ ಬಿಟ್ಟಿ ಬಟ್ಟೆ ಹಾಕುತ್ತಿದ್ದೀಯಾ ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ, ಆದರೆ ಸಮಂತಾ ಮಾತ್ರ ಇದ್ಯಾವುದಕ್ಕೂ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ.
ಸಮಂತಾ ಧರಿಸಿದ ಡ್ರಸ್ ಕುರಿತಾಗಿ ಸಮಂತಾ ಡಿಸೈನರ್ ಪ್ರೀಥಮ್ ಮಾತನಾಡಿದ್ದು, ‘ಡಿಸೈನರ್ ಇಲ್ಲದೆ ಸಮಂತಾ ಒಳ್ಳೆ ಉಡುಪು ಧರಿಸುತ್ತಾಳೆ. ಆಕೆ ಕಲೆಕ್ಷನ್ ಸೂಪರ್ ಆಗಿದೆ ಮತ್ತು ಡ್ರೆಸಿಂಗ್ ಸೆನ್ಸಸ್ ಸೂಪರ್ ಆಗಿದೆ’ ‘ಪ್ರತಿಯೊಬ್ಬ ಡಿಸೈನರ್‌ಗೂ ಈ ರೀತಿ ಪ್ರೆಶ್ ಇರುತ್ತದೆ. ನಾವು ಏನೇ ಕೊಟ್ಟರು ಸಮಂತಾ ಒಪ್ಪಿಕೊಳ್ಳುತ್ತಾರೆ ನೋ ಎನ್ನುವುದಿಲ್ಲ. ಆಕೆ ಬಾಡಿ ಲುಕ್ ಮತ್ತು ಕಾರ್ಯಕ್ರಮಕ್ಕೆ ಸೂಟ್ ಆಗುವುದನೇ ನಾವು ಆಯ್ಕೆ ಮಾಡುವುದು’ ‘ಈ ಹಳದಿ ಬಣ್ಣದ ಡ್ರೆಸ್‌ನ ನಾವು ಆನ್‌ಲೈನ್‌ನಲ್ಲಿ ಖರೀದಿ ಮಾಡಿರುವುದು. ಹಲವು ದಿನಗಳಿಂದ ಬಳಸದೇ ಹಾಗೆ ಇತ್ತು. ಯೋಚನೆ ಮಾಡಿ ಈ ರೀತಿ ಟಚ್ ಕೊಟ್ಟೆವು’ ಎಂದು ಡಿಸೈನರ್ ಪ್ರೀತಮ್ ಹೇಳಿದ್ದಾರೆ.
